Monday 13 February 2012

ಪ್ರೇಮೋತ್ಸವದನೆಪದಲ್ಲಿ (ಪ್ರೀತಿಯಿಂದ ಪ್ರೀತಿಯ ವಿಮಷೆ೯.....)

ಪ್ರೇಮೋತ್ಸವದನೆಪದಲ್ಲಿ (ಪ್ರೀತಿಯಿಂದ ಪ್ರೀತಿಯ ವಿಮಷೆ೯.....)

ಪ್ರೀತಿ ಎಂದರೇನು....?  
ಪ್ರೀತಿ ಎಲ್ಲಿದೆ....?
ಪ್ರೀತಿ ಹೇಗಿದೆ....?
ಪ್ರೀತಿ ಏಕೆ ಬೇಕು....?
ಇಂದಿನ ಕಾಲದಲ್ಲಿ ಪ್ರೀತಿಯ ಸ್ಥಿತಿಗತಿ ಏನು.....?
  ಹೀಗೆ ಪ್ರೀತಿ ಎಂದರೆ ನಮ್ಮ ಮನಸ್ಸಿನಲ್ಲಿ ಅದೆಷ್ಟು ಪ್ರಶ್ನೆಗಳು, ದ್ವಂದ್ವಗಳು ಕಾಡುತ್ತದೆಯಲ್ಲವೆ.....!
  ಪ್ರೀತಿ ಎಂದರೆ  ವಿಶ್ಲೇಷಣೆ ಅವರವರ ಬಾವಕ್ಕೆ, ಭಕುತಿಗೆ, ಖುಷಿಗೆ ಬಿಟ್ಟದು
ಕೆಲವರ ಪ್ರಕಾರ ಪ್ರೀತಿ ಎಂದರೆ......
ಕವಿಗಳಿಗೆ ಕಾವ್ಯಕ್ಕೆ ಸ್ಪೂತಿ,
ಪತ್ರಿಕೆಗಳಿಗೆ ಸುದ್ದಿ, ಸಿನಿಮಾದವರಿಗೆ ಬರಿದಾಗದ ಕಥಾ ಸಂಪತ್ತು,
ಇಂದಿನ  ಹುಡುಗ, ಹುಡುಗಿಯರಿಗೆ ಜಾಲಿ, ಟಮ ಪಾಸ್, ಕೆಲವರಿಗೆ ಸೆಕ್ಸ್ ,
ಇನ್ನೂ ಕೆಲವರಿಗೆ ಬದುಕು, ಸಾಧನೆ 
ಮತ್ತೂ ಕೆಲವರಿಗೆ ವಾತ್ಸಲ್ಯ, ಮಮತೆ ನೋವುಂಡವರಿಗೆ ಗಾಯ
ಹಿರಿಯರಿಗೆ ಮಾಡಬಾರದ ತಪ್ಪು (ಕೆಲಸ) ,ತಿಳಿಯದೆ ಮಾಡಿಕೊಳ್ಳುವ ಯಡವಟ್ಟು, ಹರೆಯದ ಹುಡುಗಾಟ,
ಪ್ರೀತಿಯೇ ಸಿಗದವರಿಗೆ ಪ್ರೀತಿಯೇಂಬುದು ಸುಂದರ ಕನಸು....
ಹೇಳುತ್ತ ಹೋದರೆ ಪ್ರೀತಿಯೇಂಬುದು ಅವರವರ ಯೋಚನೆ ಅನುಭವ ವೃತ್ತಿ ಮನಸ್ಸುಗಳ ವಷಲ್ಯತೆಯ ಮೇಲೆ ಅವಲಂಬಿಸಿರುತ್ತದೆ

ಪ್ರೀತಿ ಎಲ್ಲಿದೆ....?ಹೇಗಿದೆ....?  ಎಂದು ಹುಡುಕುತ್ತ  ಹೊರಟ ಕೆಲವರಿಗೆ ಪ್ರೀತಿ ಸಿಕ್ಕಿರ ಬಹುದು, ಆದರೆ.... ಕೆಲವರು ಪ್ರೀತಿಯ ಅವಶೇಷಗಳನ್ನು ನೆನಪಿಸಿಕೊಳ್ಳುವುದಕ್ಕೂ ಬೇಸರಿಸಿಕೊಳ್ಳುತ್ತರೆ.
ಹಾಗದರೆ ಪ್ರೀತಿಯನ್ನು ಕಂಡವರ ಪ್ರಕಾರ ಪ್ರೀತಿಯ ವಣ೬ನೆ ಏನು...?, ಅವರ ಪ್ರಕಾರ ಪ್ರೀತಿ ಎಂಬುದು ಎಲ್ಲಾರಿಗೂ ಕಾಣಿಸದ ದೇವರ ಮಾದರಿಯದ್ದು. ಶುದ್ದ ಮನಸಿನ, ಒಳ್ಳೆಯ ಉದ್ದೇಶವಿರುವ ಮನಸುಗಳಿಗೆ ಮಾತ್ರ ಕಾಣಿಸುತ್ತದೆ
ಪ್ರೀತಿ ಎಂಬುದುಎಲ್ಲಾ ಕಡೆಯು ಅವರಿಸಿರುವ ಶುದ್ದ ಗಾಳಿಯ ಹಾಗೆ ಮಾಲಿನ್ಯದಿಂದ ಹೇಗೆ ಶುದ್ದ ಗಾಳಿ ಅಶುದ್ದವಾಗಿದೆಯೊ, ಹಾಗೆಯೇ ಕಲ್ಮಷ ತುಂಬಿದ ದುರುದ್ದೆಶದ, ವಿಕೃತ ಮನಸುಗಳಿಂದ ಪ್ರೀತಿಯು ಮಾಲಿನವಗಿದೆ ಎಂಬುದು ನಿಜ.

ಹಸಿವಿಗೆ ಅನ್ನ ಬೇಕು, ಉಸಿರಾಡಲು ಗಾಳಿ ಬೇಕು, ಜಾಲಿ ಮಾಡಲು ಹಣ ಬೇಕು, ಹಾಗದರೆ ಪ್ರೀತಿ ಏಕೆ ಬೇಕು....?
ಹೌದಲ್ಲವೆ....!  ಪ್ರೀತಿ ಕೇಲವರಿಗೆ  ಬದುಕಲು ಬೇಕು, ಇನ್ನು ಕೆಲವರಿಗೆ ನೆಮ್ಮದಿಗೆ, ಮತ್ತೆ ಕೆಲವರಿಗೆ ಸಂತೋಷಕ್ಕೆ. ಇದು ಅವರವರ ಅಭಿಪ್ರಾಯ, ಆದರೆ ಪ್ರೀತಿ ಇವೆಲ್ಲವಕ್ಕೂ ಬೇಕು, ಪ್ರೀತಿ ಎಂಬುದು ಕಲ್ಪವೃಕ್ಷವಿದ್ದಂತೆ, ಕೇಳಿದ್ದೆಲ್ಲವನ್ನು ನೀಡುತ್ತದೆ ಆದರೆ ಕಲ್ಪವೃಕ್ಷವೂ ಮುರಿದು ಬಿದ್ದರೆ.... (ಬರಿದಾದರೆ)  ಬದುಕು ಶೂನ್ಯವಾಗುವುದು ಕೂಡ ನಿಜ

೨೧ನೇಶತಮಾನದಲ್ಲಿ ಇಂಟರ್ ನೆಟ್ ಯುಗದಲ್ಲಿ, ವೇಗದ ಬದುಕಿನ ಜಂಜಾಟಗಳಲ್ಲಿ. ಪ್ರೀತಿಯ ಸ್ಥಿತಿಗತಿ ಹೇಗಿದೆ ಪರಮಶಿ೯ಸಿ ಹೇಳುವುದು ಕಷ್ಟ ಕಷ್ಟ . ಇಗಿನ ಕಾಲದಲ್ಲಿ ಪ್ರೀತಿ ಎಂದರೆ ಸ್ವೆಚ್ಛೆ, ಕೆಲವರಿಗೆ ಕಾಮಕ್ಕೆ ಪ್ರೀತಿಯೇ ಕಳ್ಳದಾರಿ, ಕೆಲವರಿಗೆ ಟಮ್ ಪಾಸ್.ಇದಷ್ಟೆ ಪ್ರೀತಿಯ ಸ್ಥಿತಿಗತಿ ಯಲ್ಲ,  ಈಗಲೂ ಕೂಡ ಶುದ್ದವಾಗಿ ಪ್ರೀತಿ ಮಾಡುವವರು, ಪ್ರೀತಿಸಿ ಮದುವೆಯಾದ ನಂತರವೂ ಬದುಕು ಪೂತಿ೯ ಪ್ರೀತಿಯಿಂದ, ಪ್ರೀತಿಸುತ್ತ ಬದುಕುವ ಪ್ರೇಮಿಗಳೂ ಕೂಡ ಇಂದಿನ ಕಾಲದಲ್ಲೂ ಇದ್ದರೆ ಎಂಬುವುದು ಕೂಡ ನಿಜ
ಅದೇನೆ ಇರಲಿ ಪ್ರೀತಿ ಪರಿಶುದ್ದವಾದದ್ದು, ಪವಿತ್ರವಾದ ಪ್ರೀತಿಗೆ ಎಲ್ಲಾವನ್ನು ಪಡೆಯುವ ಮತ್ತು ನಿಡುವ ಶಕ್ತಿ ಇದೆ, ಪ್ರೀತಿಯಿಂದ ಎಲ್ಲಾವನ್ನು ಗೆಲ್ಲಬಹುದು, ಎಲ್ಲಾವನ್ನು ಸಾದಿಸಬಹುದು.
ಯಾರದೋ ಮಾತಿಗೆ, ಎಲ್ಲಿಯದೋ ವಿಷಯಕ್ಕೆ, ಪ್ರೀತಿಯ ಪವಿತ್ರಾತೆಯನ್ನು ಹಾಳುಮಾಡುವುದು ಬೇಡ. ಪ್ರೀತಿ ಜಗತ್ತು ಇರುವವರೆಗೂ ಚಿರಸ್ಥಾಯಿಯಾಗಿ ಬದುಕಲಿ ನಮ್ಮಲ್ಲಿ ಮೂಡಲಿ. 

ಕೊನೆಯ ಸಾಲುಗಳು....      

ಪ್ರೀತಿ ಎಂಬುದು ಎಲ್ಲಾರ ನಡುವೆಯೂ ಇದೆ ತಾಯಿ- ಮಗುವಿನ ನಡುವೆ, ಅಣ್ಣ- ತಂಗಿ, ಅಕ್ಕ- ತಮ್ಮಂದಿರ ನಡುವೆ, ಗೆಳಯ/ತಿ ಗೆಳಯ/ತಿಯರ  ನಡುವೆ, ಗುರು-ಶಿಷ್ಯರ ನಡುವೆ ಪರಿಶುದ್ಧವಾದ ಪ್ರೀತಿ ಶಾಶ್ವತವಾಗಿ ಇರುತ್ತದೆ. ಹಾಗೆಯೇ ಪ್ರೀತಿಸಲು, ಪ್ರೀತಿ ನಿಡಲು ಮತ್ತು ಪಡೆಯಲು ಗಟ್ಟಿಯಾದ ನಂಬಿಕೆ ಮುಖ್ಯ. ನಂಬಿಕೆ ಇಲ್ಲಾದಿದ್ದರೆ ಪ್ರೀತಿಯೂ ಇಲ್ಲಾ.
ಪ್ರೀತಿಗೆ ಕಾಲ, ಸ್ಥಳ, ಧಮ೯, ಜಾತಿ, ವಯಸ್ಸುಗಳ ಅಂತರವಿಲ್ಲ ಪಾಶ್ಚತ್ಯರಿಂದ ಕಲಿತ ಆಚರಣೆಯದರು..... ಪ್ರೇಮಿಗಳ ದಿನದ ಮುಖ್ಯ ಉದ್ದೇಶ... ನಂಬಿಕೆ ಮತ್ತು ನೆಮ್ಮದಿಯನ್ನು ಸಮಾಜದಲ್ಲಿ ಗಟ್ಟಿಗೊಳಿಸುವುದು. ಪಾಶ್ಚತ್ಯರಿಂದ ಕಲಿತ ಆಚರಣೆಯಾದರೂ.,
ನಮ್ಮ ಸಂಪ್ರದಯದಂತೆ, ನಮ್ಮ ಸಂಸ್ಕೃತಿಯೊಂದಿಗೆ ಪ್ರೇಮೋತ್ಸವವನ್ನು ಆಚರಿಸೋಣ, ಸಮಾಜದಲ್ಲಿ ಶುದ್ದ ಪ್ರೀತಿಯನ್ನು ನೆಲೆಗೊಳಿಸೋಣ

ಎಲ್ಲಾ ಪ್ರೀತಿಯ  ಗೆಳಯ ಗೆಳತಿ ಯರಿಗೂ ಪ್ರೇಮೋತ್ಸವದ ಶುಭಾಷಯಗಳು 

ಪ್ರೀತಿಯಿಂದ...... ಉತ್ತಮ್ ದಾನಿಹಳ್ಳಿ  

Tuesday 7 February 2012

ಕವನ

ಬದುಕು ತರ ತರ 
ಒಲವು ದಿನವು ಒಂಥರ
ಬಾವನೆಗಲ ಮನ್ವಂತರ 
ಸ್ನೇಹವಿದು ಮಹಾ ಸಾಗರ
ಕಾವ್ಯ ಕಲ್ಪನೆಗಳು ಅತಿ ಸುಂದರ 
ಸಾವಿಗಿದೆ ಅಂತರ 
ಸ್ನೇಹ ಪ್ರೀತಿ ಎಂದು ನಿರಂತರ ......

        ಉತ್ತಮ್