Sunday 16 July 2017

ಕವಿತೆ

ಅಲ್ಲೆಲ್ಲೊ ಸತ್ತ
ಹೆಣದ ಸುತ್ತ
ಧರ್ಮದ ಕಮಾಟು
ವಾಸನೆ ಬರುತ್ತಿದೆ

ಇಲ್ಲೆಲ್ಲೊ ಕತ್ತಿಯಲ್ಲಿ
ಕಡಿದಡಿಕೊಂಡವರ
ರಕ್ತದಲ್ಲಿ ನಾಯಕರು
ಧರ್ಮದ ಬಣ್ಣ
ಹುಡುಕುತ್ತಿದ್ದಾರೆ

ಮಠದ ಬಾಗಿಲಲ್ಲಿ
ಕುಳಿತ ನಾಯಿಗೆ
ಧರ್ಮದ ಪ್ರವಚನ
ಅರ್ಥವಾಗಿ
ತನ್ನ ಧರ್ಮ
ಹುಡುಕಲು ಹೋರಟು
ಹೋಗಿದಯಂತೆ

ಮಾರಕಟ್ಟೆಗೆ ಬಂದಿರುವ
ಧರ್ಮದ ಬಣ್ಣಗಳ
ಮುಖವಾಡ ಕೊಳ್ಳಲು
ಪುಢರಿಗಳು
ದೌಡಯಿಸಿದ್ದರಂತೆ

ಅಲ್ಯಾರದೊ ನಾಯಕನ
ಹೆಸರಿಗೆ ಇಲ್ಲೊಬ್ಬ
ಬಡಪಾಯಿಯ
ಉಸಿರು ಹೋಗುತ್ತದೆ
ಇಲ್ಯಾರೊ ಅವಿವೆಕಿಯ
ಹಸಿವಿಗೆ ಇಲ್ಲೊಂದಷ್ಟು
ಮುಗ್ಧ ಜೀವಗಳು
ನೋವನುಭವಿಸುತ್ತವೆ

ಸಾಕುಮಾಡು ನಿಮ್ಮ
ಧರ್ಮಗಳ ಬಾಯಿಯನ್ನ
ಜಗತ್ತಿನ ಯಾವ. ಧರ್ಮವೂ
ಕೊಲ್ಲಲು ಹೇಳುವುದಿಲ್ಲ
ರಕ್ತ ನೋಡಲು ಬಯಸುವುದಿಲ್ಲ

ಕೃಷ್ಣ ಹೇಳಿದ ಭಕ್ತಿ
ಏಸು ಹೇಳಿದ  ಪ್ರೀತಿ
ಫೈಗಂಬರರೆಳಿದ ತ್ಯಾಗ
ಉಜ್ವಲಿಸಲಿ ಪ್ರತಿ
ಮನದೊಳಗೆ ಪ್ರಜ್ವಲಿಸಲಿ
ಧರ್ಮದೊಳಗಿರವ ಅಂಧರಿಗೆ
ದಾರಿ ದೀಪವಾಗಲಿ

#ಉತ್ತಮ್