Tuesday 25 May 2021

ರಾತ್ರಿ ಎಂಬ ನೆನಪಿಗೆ

ಒಂದು ಜಾಗರಣೆಯ
ಸುಧೀರ್ಘ ರಾತ್ರಿಯ
ಹಾದಿಯಲಿ ಸಿಕ್ಕವಳ 
ಮನದಲ್ಲಿ ನೋವಿತ್ತು
ನೋವನ್ನು ಮರೆಮಾಚುವ
ಮೋಹದ ಉನ್ಮಥತೆ 
ಹಂಗಿಲ್ಲದ ಬಂಧವೊಂದು
ಕನವರಿಸಿ ಎಚ್ಚರವಾಗಿಸಿತ್ತು

ಬೆನ್ನ ಮೇಲಿನ ಗೀರು
ಕಣ್ಣಂಚಿನ ಬೀಸಿನೀರು
ಏರಿಳಿಯುವ ಉಸಿರು
ಮನಸಿನಾಳದ ಮೋಹರು
ದಾಟಿಕೊಳ್ಳಲು ದೂರವೇನು
ಭಾರವಾಗಿ ಕಾಯುವುದೂ ಇಲ್ಲಾ

ಬರೀ ಕಾಲಹರಣ
ಅವಕಾಶವಷ್ಟೆ ನಾನ್ಯಾರು
ನಿನ್ಯಾರೂ ಕೇಳಿಕೊಳ್ಳದೆ 
ಅಂತಃಕರಣಕ್ಕಿಳಿದ ಪೇಲವ
ವೆನಿಸಿದ ಇರುಳಿಗೆ
ರೋಚಕತೆಯ ತುಂಬಿಸಿ
ಬೆಳಕಾ ಹರಿಸಿದ್ದು
ನಾವೆಂದುಕೊಂಡು ಸಂಭ್ರಮಿಸಲು
ಕಾರಣವಲ್ಲದ ನೆನಪಷ್ಟೆ

ಮತ್ತದೆ ಬೋರು
ದಾಳಿಯಾಗದ ಕೊನರು
ಕೇಳಿಕೊಳ್ಳದ ಹೇಸರು
ಎಂದಿಗೂ ಚಿಗುರದ ಹಸಿರು
ಕಾಳಜಿಯೆಂದೂ ಪ್ರೀತಿಯೂ
ಅಲ್ಲಾ ಸ್ನೇಹಕ್ಕೂ ಬರುವುದಿಲ್ಲ
ಗುಂಗಿಲ್ಲದ ಭಾವಗಳೂ
ಕಟ್ಟು-ಪಾಡಿಗಂಜುವ 
ಬದುಕಿಗೊ ನಮ್ಮಿಬ್ಬರಿಗೂ
ಬೇಕು ಬೇಡದ ನೆಪವಷ್ಟೆ

ಹೆಣ್ಣೆಂದರೆ ಅರಳಿಮರವಲ್ಲ
ಸುತ್ತಿದಕ್ಷಣ ಒಲಿಯಲೂ
ಮೌನವಾದರೆ ಧ್ಯಾನವೆಂದು
ತಪ್ಪು ತಿಳಿದು
ಬೆಪ್ಪನಾದರೆ ಮುಗಿದೆ
ಹೋಯಿತು ಮನಸ್ಸು
ಅರಿಯದಿದ್ದರೂ ಪರಿಸ್ಥಿತಿಗಾಗಿ
ಚಡಪಡಿಸಬೇಕು

ನಿನಿಲ್ಲ ಇಲ್ಲಿ
ನನಗೂ ಇಲ್ಲೆನೂ ಇಲ್ಲಾ
ಅನಿರೀಕ್ಷಿತವಾದರೂ
ನಿರೀಕ್ಷಿತಾವಾಗೆ  ಕಾತರಿಸುತ್ತ
ಕಾದಿರಿಸಿದ್ದೆನೆ, ಬಾರದೆ
ಉಳಿಯಲೂ ಸಬೂಬು
ಸಿಗಬಹುದು ಬರಲಷ್ಟೆ
ನಿಜ ನಮ್ಮೊಳಗಿನ
ಬಂಧಗಳ ಮೀರಿ ಮತ್ತೆನೊ
ಇದೆ, ಬಂದು ಬೀಡು ಮತ್ತೆಂದೂ
ಎಲ್ಲೂ ಕದಲದಂತೆ

#ಉತ್ತಮ್
#linked 
#ರಾತ್ರಿಯ_ಪದ್ಯ

ರಾತ್ರಿಯಿಂದ ಬೆಳಗಿಗೆ

ಈ ರಾತ್ರಿಗಳು
ಹೋಸದೆನೂ ಅಲ್ಲ
ಏಕಾಂತ ಕೂಡ
ಹಾಳದ ನೆನಪು
ಪೋಲಿತನದ ಕನಸು
ಕತ್ತಲೆಯ ದಾರಿಗಳಷ್ಟೆ
ಹೋಸದಾಗಿ ತೆರೆದು
ಕೊಳ್ಳುತ್ತವೆ

ಇಂದಿದ್ದವರೂ
ನಾಳೆಗೆ ಇಲ್ಲ
ನಾಡಿದ್ದಿಗೆ ಮತ್ಯಾರೊ
ಜೋತೆಯಾಗುತ್ತರೆ
ಇದ ಅರಿತವನಾರೂ
ಇರುಳು ಎಚ್ಚರ 
ಇರುವುದಿಲ್ಲ

ಬಿಕ್ಕಳಿಕೆ ಒಂಚೂರು
ಹಸಿ ಮೌನವೆ
ಬಿಸಿಯುಸಿರು
ಜೋಂಪು ಬಂದ 
ಕಣ್ಣುಗಳಿಗೆ ಜಾತ್ರೆಯ
ವೇಗದ ಪರಿ
ತಿಳಿಯುವುದಿಲ್ಲ

ಹೂ ಚಿತ್ರದ ಹೊದಿಕೆ
ಮೈ ಬೆವರಿಳಿಸಿ
ಸುಡುವ ಸೆಖೆ
ದಿಗ್ಭ್ರಮೆ ಗೊಳಿಸುವ 
ಎಚ್ಚರಿಕೆ
ಇನ್ನೆಲ್ಲಿ ಕಪ್ಪದ
ಮನಸಿಗೆ ಚೇತರಿಕೆ

ಮಂಪರಿನಲ್ಲಿರುವ
ಬೀದಿಯಲ್ಲಿ
ಕಂಗೊಳಿಸುವ 
ಪೋಲಿ ಬಯಕೆಗಳು
ರಚ್ಚೆಹಿಡಿದು ನಿದಿರೆ
ನೆಮ್ಮದಿಯನ್ನು
ಆಚೆ ತಳ್ಳಿಬಿಡುತ್ತವೆ

ಕತ್ತಲೊಳಗಿನ ಚಾಂಛೆ
ಗಳು ಬೆತ್ತಲಾಗಿ
ಎದೆಯೊಳಗಿನ
ಸಭ್ಯತೆಯನ್ನೆ
ಪ್ರಶ್ನೆ ಮಾಡಿ 
ಇರುಳಿಗೊಂದು 
ಅಂತ್ಯ ಹಾಡಿ
ಬೆಳಗಾಗಿಸುತ್ತವೆ

#ಉತ್ತಮ್
#ರಾತ್ರಿಯಿಂದ_ಬೆಳಗಿಗೆ

ಪ್ರೇಮವ ಅರಸಿ

ಸ್ನೇಹದ ಕುರಿತು  ನನ್ನಲ್ಲಿ
ಯಾವುದೆ ವಿರೋಧದ
ಅಭಿಪ್ರಾಯ ಇಲ್ಲ ಆದರೆ
ಇ ಪ್ರೀತಿಯ ವ್ಯಾಖ್ಯಾನಗಳನ್ನು 
ಹರಯಕ್ಕೆ ಬರುವ ಮುನ್ನವೆ
ತಡಬಡಿಸಿ ಒಪ್ಪಿಸುತ್ತರಲ್ಲ ಅವರ
ಮೇಲೆ ಕರಣೆ ಮೂಡುತ್ತದೆ

ಮೊನ್ನೆ ಐವತ್ತು ತುಂಬಿದ 
ಅವಿವಾಹಿತೆಯ ಮಖದಲ್ಲಿನ
ಗಂಟು ಬಿಚ್ಚಿಕೊಂಡಿಲ್ಲ
ಫೂಟ್‌ಪಾತಿನ ಮೇಲೆ ಕುಳಿತು
ರಸ್ತೆಯ ತಿರುವನ್ನೆ ದಿಟ್ಟಿಸುವ
ಭಗ್ನ ಪ್ರೇಮಿಯ ಕಾಯುವಿಕೆ
ಮುಗಿದೆ ಇಲ್ಲಾ ಇವೆಲ್ಲಾವನ್ನೂ
ನೋಡಿದ ಮೇಲೆ ಪ್ರೀತಿಯ
ಅಸ್ತಿತ್ವದ ಕುರಿತು ಸಂಶಯ 
ಮೂಡುತ್ತದೆ

ಸುಖ ಭೋಗದ‌ ಮಿಲನದಲಿ
ಅವಶ್ಯಕ ಮತ್ತು ಅನವಶ್ಯಕದ
ಲೆಕ್ಕಾಚಾರದ ಬದುಕಿನಲಿ
ನೆಮ್ಮದಿ ನಿರೀಕ್ಷೆಗಳ ಹುಡುಕಿ
ಅಲೆದು ವಿರಹ‌ ಆಗಲಿಕೆಗಳೆಂಬ
ನೋವನ್ನಷ್ಟೆ   ಪಡೆದು
ಪ್ರೇಮ ಅಮರವೆಂದು
ಸಾರುವ ನಮ್ಮ ಕಂಠವೆಲ್ಲ
ಮಧುರಾರ್ಥನಾದವೆಂದು
ಭ್ರಮೆಯಾಗುತ್ತೆವೆ

ಹಚ್ಚಿಟ್ಟ ಹಣತೆ
ಬಿಚ್ಚಿಟ್ಟ ಉಡುಪು
ಬಿಸಿಯಾದ ಉಸಿರು
ಹಸಿಯಾದ ಕೊನರು
ಗರ್ಭದಾಳದಲಿ ಮೂಡಿದ ಚಿಗುರು
ಆಸೆ ಚಾಪಲ್ಯಗಳಡಿ
ಸತ್ತು ಬಿದಿದ್ದ ಮೌಲ್ಯಗಳೆಲ್ಲ
ಒಲವಿನದೆ ಎಂದರೆ
ತಪ್ಪಾಗುವೂದಿಲ್ಲವಲ್ಲವೆ

ಹುಡುಕುತ್ತ ಅಲೆದರೆ ಸಿಗಬಹುದೆ
ತಡಕಾಡಿದರೆ ಇಲ್ಲೆ ಇರಬಹುದೆ 
ಸಿಗದೆ ಕಾಲವಾಗುವ ಆತ್ಮ
ಇನ್ನೆನ್ನನ್ನು ಕೇಳಿಯಾತು
ಹಿಡಿ ಪ್ರೀತಿಗೆ ಇಡಿ
ಆಯಸ್ಸನ್ನೆ‌ ಕಳೆದು
ಮರಟಿಬಿದ್ದ ದೇಹದೊಳಗಿನ 
ಎದೆಯೊಳಗೆ ಕದಲುವ
ಸಣ್ಣ ಅಣುವೆ  ನಾ
ಅರಸಿದ್ದು ಎಂದು ತಿಳಿಯದೆ
ಬದುಕು ಮುಕ್ತಾಯವಾಗುತ್ತದೆ

#ಉತ್ತಮ್

ಅಶ್ಲೀಲತೆಯ ತನಿಖೆ

ಕತ್ತಲದಂತೆಲ್ಲ ಬೆತ್ತಲಾಗುವ 
ಸಭ್ಯತೆಗೆ ತುಸು‌ ನಾಚಿಕೆ
ಅತಿ‌ ಅಂಜಿಕೆ ಸರಿ ಅನಿಸಬಹುದೆನೋ
ಒಳಗಿರುವ ಆಸೆಗಳು ತಂಡವವಾಡಿ
ಹೊರ ಬರಲು ಕಾತರಿಸಿ
ಕಂಗೆಡುವುದು ಸಳ್ಳೇನಲ್ಲ

ನಗ್ನತೆಯಿಲ್ಲಿ ಅಶ್ಲೀಲ ವಾದರೆ
ಹುಟ್ಟು ಹೆಸಿಗೆಯಾಗಬೇಕು 
ಮಿಲನವೆಂದರೆ ಕೆಟ್ಟ ಆಟವಾದರೆ
ಅದು ಚಟದ ಹಠವಾಗಿ‌ ಕಂಗೆಡಿಸಿ
ನಿನ್ನ ಬದುಕನ್ನು ಕೊಲ್ಲಬಹುದು

ಕೈ ಬಳಸಿ ಮೈ ಸವೆಸಿ
ಅಂತರಾಳಕ್ಕಿಳಿದು ಅರ್ಥೈಸಿ
ಉತ್ಕಟತೆಯ ತುತ್ತ ತುದಿ 
ತಲುಪಿದ ನಂತರ ಸಿಗುವುದು
ಆತ್ಮ ತೃಪ್ತಿಯೊ ಕ್ಷಣದ ಖುಷಿಯೊ
ಇಲ್ಲ ಭ್ರಮೆಯ ಸಾವೊ ದ್ವಂದ್ವ
ಕಾಡುತ್ತಲೆ ಇರುತ್ತದೆ

ಮೌನ ವೆಂಬುದು ಒಪ್ಪಿಗೆ
ದ್ಯಾನವಿಲ್ಲಿ ಅಪ್ಪುಗೆ
ಮೋಹದ ಪೂಜೆಗೆ 
ಯಾವ ಆಚಾರ ವಿಚಾರಗಳಿಲ್ಲ
ಒಲವೆಂಬುದು ಹೂ ವಷ್ಟೆ
ಬಾಡಿಹೋದ ಪಕಳೆಗಳಿಗೆ
ನೆನಪಷ್ಟೆ ಮೌಲ್ಯವಿಲ್ಲ

ಭವ ಭಕ್ತಿ ಇಲ್ಲದ ಕಾಯ
ಯಾಂತ್ರಿಕವಷ್ಟೆ ತಂತ್ರಗಳು
ವಿಜೃಂಭಿಸಿ ಮೋಹದ ಮೋಸ
ಆರಧನೆಯೆ ಅವಿಶ್ವಾಸ ಚಾಂಛೆಯ
ಎದುರಲ್ಲಿ ದೇಹಗಳೆರಡು ಹಸಿಬಿಸಿಯಾಗಿ
ಅಂತರಾಳದ ಆತ್ಮವನ್ನು  
ಕೊಂದುಕೊಂಡಿದ್ದು ತನಿಖೆಯಾಗಲೆ ಇಲ್ಲಾ

#ಉತ್ತಮ್

ಹೆಸರಿಲ್ಲದ ಬಂಧ

ಕಾತುರವೇನೊ ಇತ್ತು
ಆತುರವಿರಲಿಲ್ಲ ನಾವೆಂದಿಗೂ 
ಅಪರಿಚಿತರಾಗಿರಲ್ಲಿಲ್ಲವೇನೊ
ಪರಿಭ್ರಮಣೆಗಳೆನೂ ಇರಲಿಲ್ಲ

ಅನಿರೀಕ್ಷಿತವಾದರೂ ಭೇಟಿ
ನೀರಿಕ್ಷಿತವೆ ವಕ್ರರೇಖೆಗಳು
ನಾವು ಸಂಧಿಸಲೆಬೇಕಾ
ಕಾಲ ಇಲ್ಲಿ ಅಪೇಕ್ಷಿತ

ಸಂಭ್ರಮ ನಿನ್ನಿಂದಲೆ 
ಆರಂಭವಾಗಿದ್ದು ನನಗಿಲ್ಲಿ
ಸಂಕ್ರಮಣ ಸಾವಿರ ಕಣ್ಣುಗಳ
ಜಾತ್ರೆಯಲಿ ನಿನ್ನ ಕಣ್ಣಿನ ಸರ್ಥಕತೆಯ
ಹುಡಕಿ‌ ತೆಗೆದಿಟ್ಟು ಕೊಂಡೆ

ಸ್ನೇಹವೆಂದರೆ ಪ್ರೇಮದ 
ಇನ್ನೊಂದು ರೂಪ ಇರಬಹುದು
ಅದರಿಲ್ಲಿ ಬಂಧಗಳಿಗೆ ಹೇಸರಿನ
ಹಂಗು ಬೇಕಾಗಿಲ್ಲ ನೆನಪಿಟ್ಟುಕೊ

ನೂರು ಜನರ ನಡುವೆ ನಾನ್ಯಾಕೆ
ನಿ ಹಂಚಿಕೊಂಡ‌ ಕನಸು
ಸಿಹಿ ಮಾತು ಅಪ್ಪುಗೆ 
ಕೈ ಮಿಳಿತ ಮಾಸಲಾರದ ನೆನಪು
ಬದುಕಿಗಿಷ್ಟು ತುಂಬಿಕೊಂಡ ಜೋಳಿಗೆ

#ಉತ್ತಮ್