Tuesday 25 May 2021

ಕಾಫಿ ಶಾಪಿನ‌ ಪದ್ಯ

ಬಿಳ್ಕೊಟ್ಟು ಹೋಗುವಾಗ
ನೀ ತಿರುಗಿ ನನ್ನನ್ನೆ
ನೋಡುವೆ ಎಂದು
ಕಾಯುತ್ತಿದ್ದೆ , ನೀ ಮರೆಯಾಗುವವರೆಗೂ 
ನೋಡಿ, ನಿ ತಲುಪಿ
ಕರೆ ಮಾಡಿ ಕೇಳಿದಾಗಲೂ
ನಾನಲ್ಲೆ ನಿನ್ನಲ್ಲೆ ಇರುತ್ತಿದ್ದೆ

ಕಾಫಿ ಶಾಪಿನಲ್ಲಿ ನೀನೆ
ಅರ್ಡರ್ ಮಾಡಿದ ಹೃದಯದ
ಕಾಫಿಯನ್ನು ಕುಡಿದರೆ ಅದರಲ್ಲಿ 
ಮೂಡಿರುವ ಹೃದಯ
ಕದಲುತ್ತದೆಯೆಂದು ನಾ 
ಯೋಚಿಸುತ್ತಿರುವಾಗ ನೀ
ಕಾಫಿ ಹೀರಿ ನಕ್ಕಾಗ
ತುಟಿ ಮೇಲೆ ಮೂಡಿದ
ಪ್ರೀತಿಯ ಮೀಸೆಗಳಲ್ಲಿ
ನನ್ನನ್ನೆ ನಾನು ಕಂಡುಕೋಳ್ಳುತ್ತಿದ್ದೆ

ಆ ಕಾರಿಡಾರಿನಲ್ಲಿ
ನಾವಿಬ್ಬರು ನಡೆಯುವಾಗ
ಅಚನಾಕ್ ಆಗಿ ನಮ್ಮ
ಕೈಗಳು ತಾಕಿದಾಗ
ರೊಮಂಚಿತನಾಗಿ
ನನ್ನನ್ನೆ ಮರೆಯುತ್ತಿರುವಾಗ
ಬೆರಳಿಗೆ ಬೆರಳು ಬೆಸೆದು  
ಬದುಕಿನ ಚಲನೆಯನ್ನೆ 
ವೇಗವಾಗಿಸಿ ನನ್ನ
ನಡಿಗೆಯನ್ನೆ ನಿಧಾನವಾಗಿಸುತ್ತದೆ

ನಾ ನಿನಗೆ ಕಾಯುತ್ತೆನೊ
ನೀ ನನಗೆ ಕಾತರಿಸುತ್ತಿಯೊ
ಭೇಟಿಯಾಗುವುದೆಂದರೆ
ತಿರುವುಗಳಲ್ಲಿ ಚಲಿಸುವ
ಕಾರುಗಳು ದುಂಬಿಯಾಗಿ
ಜನಗಳೆಲ್ಲ ಹೂವಗಿ
ಎಲ್ಲಾರೂ ಯಾವುದೊ
ಅಸಂಬಧ ಅಪರೂಪದ 
ಲೋಕಕ್ಕೆ ಹೊರಟ್ಟಿದ್ದರೇನೊ
ಅನಿಸಿಬಿಡುವುದು ನನಗಷ್ಟೆ
ನಿಜವೆನೊ...

ಸಿಗುವ ಉಮೆದುಗಳಿಲ್ಲ
ಕೇಳಿಕೊಳ್ಳುವ ಜವಾಬುಗಳಿಲ್ಲ
ಸಂಧಿಸುವ   ಕಾಲ
ಸೆಳೆದುಕೊಳ್ಳುವ ಜಾಲ
ಮಾತಿನ ಮಾಧುರ್ಯ
ಮೌನದ ಅಂತರ್ಯ
ಸಂಭ್ರಮಕ್ಕೊಂದು ದಾರಿ
ಸವಿ ಸಂಜೆಯ ಸವಾರಿ 

#ಉತ್ತಮ್
#reverse_poetry

No comments:

Post a Comment