Tuesday, 25 May 2021

ಹೆಸರಿಲ್ಲದ ಬಂಧ

ಕಾತುರವೇನೊ ಇತ್ತು
ಆತುರವಿರಲಿಲ್ಲ ನಾವೆಂದಿಗೂ 
ಅಪರಿಚಿತರಾಗಿರಲ್ಲಿಲ್ಲವೇನೊ
ಪರಿಭ್ರಮಣೆಗಳೆನೂ ಇರಲಿಲ್ಲ

ಅನಿರೀಕ್ಷಿತವಾದರೂ ಭೇಟಿ
ನೀರಿಕ್ಷಿತವೆ ವಕ್ರರೇಖೆಗಳು
ನಾವು ಸಂಧಿಸಲೆಬೇಕಾ
ಕಾಲ ಇಲ್ಲಿ ಅಪೇಕ್ಷಿತ

ಸಂಭ್ರಮ ನಿನ್ನಿಂದಲೆ 
ಆರಂಭವಾಗಿದ್ದು ನನಗಿಲ್ಲಿ
ಸಂಕ್ರಮಣ ಸಾವಿರ ಕಣ್ಣುಗಳ
ಜಾತ್ರೆಯಲಿ ನಿನ್ನ ಕಣ್ಣಿನ ಸರ್ಥಕತೆಯ
ಹುಡಕಿ‌ ತೆಗೆದಿಟ್ಟು ಕೊಂಡೆ

ಸ್ನೇಹವೆಂದರೆ ಪ್ರೇಮದ 
ಇನ್ನೊಂದು ರೂಪ ಇರಬಹುದು
ಅದರಿಲ್ಲಿ ಬಂಧಗಳಿಗೆ ಹೇಸರಿನ
ಹಂಗು ಬೇಕಾಗಿಲ್ಲ ನೆನಪಿಟ್ಟುಕೊ

ನೂರು ಜನರ ನಡುವೆ ನಾನ್ಯಾಕೆ
ನಿ ಹಂಚಿಕೊಂಡ‌ ಕನಸು
ಸಿಹಿ ಮಾತು ಅಪ್ಪುಗೆ 
ಕೈ ಮಿಳಿತ ಮಾಸಲಾರದ ನೆನಪು
ಬದುಕಿಗಿಷ್ಟು ತುಂಬಿಕೊಂಡ ಜೋಳಿಗೆ

#ಉತ್ತಮ್

No comments:

Post a Comment