Tuesday 25 May 2021

ಪ್ರೇಮದ ದೂರ

ಪ್ರೇಮದಲ್ಲಿ
 ದೂರವೆಂದರೆ ಎದೆಯ
ಭಾರವನ್ನು ಹೊತ್ತು
ಕನಸಿನ ಸೌಧ ಕಟ್ಟಿ
ಬೀಳಿಸಿ ಆಡುವ
ಆಟವಷ್ಟೆ

ನನ್ನ ನಿನ್ನ ನಡುವೆ
ಏನಿಲ್ಲಾವೆಂದರೂ
ಸ್ವಾರ್ಥ  ಸುಳಿಯುವುದು
ನಡುವೆ ಇನ್ನೊಬ್ಬ 
ಸುಳಿದಾಗ ಕಾಡುವ
ನೋವಷ್ಟೆ

ಕವಿತೆಗೆ ಹೆಣ್ಣು ಪ್ರೀತಿ
ನೋವು ಕಾವು
ಬೇಕಿಲ್ಲದಿರಬಹುದು
ಬರೆದಿಟ್ಟ ಮೇಲೆ
ಮನದೊಳಗುಳಿಯುವ
ಭಾವುಕತೆಯ ನೆನಪಷ್ಟೆ

ನೀ ಹೋಗಬಹುದು
ಮಾತು ಮರೆಯಬಹುದು
ನಾನುಳಿಯಬಹುದು
ಪ್ರೇಮ ಪತನವ ಸಹಿಸಿ
ನಗಬಹುದು ಮತ್ತ್ಯಾರನ್ನೊ
ಅರಸಿ ಅಲೆಯಬಹುದು
ನನಗುಳಿಯುವುದು
ಖಾಲಿ ಜೋಳಿಗೆಯ
ಬದುಕಷ್ಟೆ 

#ಉತ್ತಮ್

No comments:

Post a Comment