Tuesday 13 December 2016

ಕವಿತೆ

ನಡುರಾತ್ರಿ ಕಳೆದ ಮೇಲೆ
ನಡುರಾತ್ರಿ ಕಳೆದ ಮೇಲೆ
ಕನಸುಗಳೆಲ್ಲ
ಎಚ್ಚರವಾಗಿಬಿಟ್ಟಿವೆ

ಇಲ್ಲಿ ವಿರಹದುರಿ
ಅಲ್ಲಿ ಅಮಲೆರಿ
ತೊಳಲಾಡುತ್ತಿವೆ

ಕೌದಿಯೊಳಗಿನ
ನೋವು
ಜಮುಕಾನದಡಿಯ
ಕಾವು

ದಿಂಬಿನೊಳಗಡೆ 
ಕರಗಿದ ಕಣ್ಣಿರು
ಮೌನದಲ್ಲಿ
ಸೆರಿದ ನಿಟ್ಟುಸಿರು

ಕನಸುಗಳು
ಮಲಗುವುದಿಲ್ಲವೆನೊ
ಬಾಕಿ ಉಳಿದಿರುವ ನೆನಪು
ಇಡೆರದ ಪೋಲಿ ಆಸೆಗಳು
ಎಲ್ಲವನು ತಂದು
ರಾಶಿಹಾಕ್ಕಿಕೊಳ್ಳುತ್ತಿದೆ
ಇಂದು ನಿದ್ದೆಯ
ಕೊಲೆಯಾಗುವುದು ಖಂಡಿತ

#ಉತ್ತಮ್#

ಕವಿತೆ

ನನ್ನೊಂದಿಗೆ ಹುಟ್ಟಿದ
ನನ್ನೊಂದಿಗೆ ಹುಟ್ಟಿದ
ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ
ನನ್ನೊಳಗೆ ಬೆಳೆಯುತ್ತಿರುವ
ದ್ವಂದ್ವಗಳಿಗೂ ಕಾರಣ ಗೊತ್ತಿಲ್ಲ

ಒಮ್ಮೊಮ್ಮೆ ಮನಸಿಗೆ
ರಂದ್ರ ಕೊರೆದು
ಹೊರಗಿಣುಕ್ಕುತ್ತವೆ
ಅಲ್ಲೆನಿದೆ ಬರಿ ಕತ್ತಲು
ಹುಚ್ಚೆದ್ದು ಕುಣಿಯುತ್ತಿರುವ
ಮನಸುಗಳೆಲ್ಲ ಅರೆ ಬೆತ್ತಲು
 
ಕರುಳು ಬಳ್ಳಿ ಹೆತ್ತೊಡಲು
ಸಂಭಂದ ಬಾಂಧವ್ಯ
ಸ್ನೇಹ ಪ್ರೀತಿ ಎಲ್ಲಾವೂ
ಆಗಗ ಎದೆಯೊಳಗೆ
ಮಂಥನಕಿಳಿಯುತ್ತವೆ

ಆಟ ಪಾಠ
ಕರ್ಮ ಧರ್ಮ
ಮದುವೆ ಮಕ್ಕಳು
ಅನುಮಾನದ ಬದುಕಲಿ
ಅನಿವಾರ್ಯವಾಗಿ ಹೆಜ್ಜೆ ಹಾಕುತ್ತವೆ

ತಲೆಯಲ್ಲಿರುವ ದ್ವಂದ್ವಗಳು
ಬಡಿದಟ್ಟಕ್ಕಿಳಿದು
ಎದೆಯಲ್ಲಿರುವ ಪ್ರಶ್ನೆಗಳಿಗೆ
ಹುಚ್ಚು ಹೆಚ್ಚಗಿ
ದೇಹವೆ ನಿರ್ಜಿವವಾಗಿ
ಬಿದ್ದಿರುವಾಗ

ಅದ್ಯಾವ ಸಂಬಂದಗಳು
ಕರ್ಮದೊಳಗಿನ ಧರ್ಮವು
ನಿ ಕಲಿತ ಪಾಠದೊಳಗಿನ ವಿದ್ಯೆಯು
ನಿನ್ನನ್ನು ಸಜೀವಗೊಳಿಸುವುದಿಲ್ಲ

#ಉತ್ತಮ್#

ಕವಿತೆ

ನಿನ್ನ ಖುಷಿಗಾಗಿ ಬರೆದ
ನಿನ್ನ ಖುಷಿಗಾಗಿ ಬರೆದ
ಕವಿತೆಗಳನು ಹೆಕ್ಕಿ ತೆಗೆದು
ತಿದ್ದಿ ತಿಡಿ ಪರಮರ್ಶಿಸಿ
ನವನವಿನವಾಗಿಸಿ
ಹೊಸದಾಗಿ ಬರೆದಿಹೆನು

ಅದರೆನು ಗೆಳತಿ
ನಿನ್ನ ನೆನಪ ಹೊರತಾಗಿ
ನಿನ್ನನು ಪಡೆಯುವ
ಯಾವ ನೀರಿಕ್ಷೆಗಳು
ನನ್ನಲಿ ಉಳಿದಿಲ್ಲ

ನಿನ್ನ ಖುಷಿಯ ಕ್ಷಣಕೆ
ನಿನ್ನ ಒಲುಮೆಯ ಭಾವಕ್ಕೆ
ನನ್ನಲ್ಲಿ ಪದಗಳು ಉಳಿದಿಲ್ಲ
ಕವಿತೆಯೆಕೊ ಸೋಲುತ್ತಿದೆ

ನಿನ್ನ ನೆನಪುಗಳಷ್ಟೆ
ನನ್ನೆದೆಯ ಪಾಲು
ಸತ್ತ ಕವಿತೆಯ ಸಾಲು
ಕವಿತೆಯೆಂಬುದು
ನೋವಿನ ಬಾಳು

#ಉತ್ತಮ್#

ಕವಿತೆ

ಹರಿದ ಚಪ್ಪಲಿಗಾಕಿದ
ಹರಿದ ಚಪ್ಪಲಿಗಾಕಿದ
ಹೊಲಿಗೆಯ ಗಂಟು
ಕಾಲಿಗೊತ್ತಿ ಬಾವಗಿ
ಬಾವು ನೊವಗಿ
ಚಿತ್ರಹಿಂಸೆ ನಿಡುತ್ತಿದೆ

ಚಪ್ಪಲಿಯದೆ ತಪ್ಪೊ
ಅಳತೆ ಬದಲಿಸಿದ
ನನ್ನ ತಪ್ಪಿದೆಯೊ
ಉಳಿಸಲು ಗಂಟು
ಹಾಕ್ಕಿದೆ ತಪ್ಪೆನಿಸುತ್ತದೆ

ತುಸು ದೂರ ಸಾಗಿ
ನೋವು ತಡೆಯಲಾರದೆ
ಚಪ್ಪಲಿ ಕಿತ್ತಸೆದು
ನಡೆಯತೊಡಗಿದೆ
ನೋವು ಮುಗಿದು
ಬಾವು ಮಾಯವಾಗಿ
ಗುರಿಯ ಮುಟ್ಟಿದೆ

#ಉತ್ತಮ್#