Friday 13 September 2019

ಯಾಂತ್ರಿಕತೆಯ ಬದುಕಿನಲ್ಲಿ

ಇತ್ತಚೆಗ್ಯಾಕೊ
ಇ ಸಂದೇಶಗಳಲ್ಲಿ
ಭಾವಗಳಿಲ್ಲ
ದಿನದ ಶುಭಷಯಗಳು
ಕೇವಲ ಯಾಂತ್ರಿಕವಷ್ಟೆ

ಊಟ,ತಿಂಡಿ, ಕಾಫಿ,ಟೀ
ಆಗಿದೆಯೆಂದು ತಿಳಿದಿದ್ದರು
ಮಾತಿನ ಆರಂಭ
ಪ್ರಾರಂಭ ವಾಗಬೇಕಷ್ಟೆ

ಪ್ರೇಮಿಗಳಿಗೂ
ಮಾತು ಬೇಸರವಾಗುತ್ತದೆ
ಸ್ನೇಹ ಕೂಡ
ಕೊಟ್ಟು ತೆಗೆದುಕೊಳ್ಳುವ
ನೀರಿಕ್ಷೆಯಲ್ಲಷ್ಷೆ
ಚೆಂದವಂತೆ

ಅತಿಯಾಗಿ ಲಲ್ಲೆಗರೆಯುವ
ಮೋಹವೆ ಹುಟ್ಟತ್ತಿಲ್ಲ
ಆಸೆಯಿದ್ದರು ಕಾಮ
ಹಾಕಿ ಫುಲ್ ಸ್ಟಾಪ್
ಇಡುವಲ್ಲಿಗೆ ಮಾತು
ಮುಗಿಯುತ್ತದೆ

ದೂರವಾಗುವೆವು ಎಂಬ
ಭೀತಿಯಲ್ಲಿ ಮಾತಿಗೆ
ಮಿತಿ ಇಟ್ಟು
ಎದೆ ಭಾರ
ಮಾಡಿಕೊಂಡು
ಹೃದಯಾಘಾತವಾಗಬೇಕಷ್ಟೆ

#ಯಾಂತ್ರಿಕತೆಯ_ಬದುಕು
#ಉತ್ತಮ್

ಕವಿತೆಯೆಂದರೆ

ಈಗೀಗ ಕವಿತೆ
ಬರೆಯುವುದೆಂದರೆ
ಕೈ ನಡುಗುತ್ತದೆ
ಎದೆ ಭಾರವಾಗುತ್ತದೆ

ಅದಕ್ಕಾಗೆ ಒಂದೆರಡು
ಪೇಗ್ ವಿಸ್ಕಿ ಇಳಿಸಿ
ನಡುವೆ
ಒಂದೆರಡು ಸಿಗರೆಟ್
ಸುಟ್ಟು ಪೆನ್
ಹೀಡಿದು ಕುಳಿತೆ

ಮತ್ತದೆ ಪ್ರಶ್ನೆ
ಯಾಕೆ ಕವಿತೆ !?
ಏನು ಕವಿತೆ !?
ಹೇಗೆ ಕವಿತೆ !?

ಸತ್ಯ-ಸುಳ್ಳು
ಗಳೆಲ್ಲಾ ಕಲಬೆರಕೆ
ಯಾಗಿ ಸುಳ್ಳುಗಳೆ
ಸತ್ಯವಾಗಿರುವಾಗ
ಕವಿತೆಯಿಂದೆನು
ಸತ್ಯನ್ವೇಷಣೆಯಾಗುತ್ತದೆ

ಹೋಗಳಲೊಬ್ಬ
ತೆಗಳಲೊಬ್ಬ
ನಾಯಕನ ಜೋತೆಗಿರುವಾಗ
ಇನೆಂತ ಕ್ರಾಂತಿಯಾಗಬಲ್ಲದು
ಕವಿತೆಯಿಂದ

ಕವಿತೆಗ್ಯಾವ ಹೇಣ್ಣು
ಒಲಿದಿದ್ದು ಕೇಳಾಲಿಲ್ಲ
ನಲಿದ ಹೇಣ್ಣು
ಪ್ರಾಸ ಪದಗಳಿಗೊ
ಕವಿತೆ ಅಂತರ್ಯಾಕ್ಕೊ
ಮರುಗದೆ ಬರೆದವನ
ಸುಳ್ಳಿಗಷ್ಟೆ ಉಳಿಯುತ್ತಾಳೇನೊ

ಯುದ್ದವಾದರೆ ಆಗಲಿ
ಬುದ್ದ ನಕ್ಕರೆ ನಗಲಿ
ಮಗು ನಕ್ಕರೆ
ನಗು ಸತ್ತರೆ
ಹಿಂಗೆಲ್ಲ ಅಸಂಬದ್ಧಗಳಿಗೆ
ಕವಿತೆ ಹುಟ್ಟುವೂದು ಇಲ್ಲ

ಅದೆ ಹೆಣ್ಣು ಹಣ್ಣು
ಪ್ರೀತಿ ಕಾಮ
ಮೋಹ ದಾಹ
ನೋವು ನಲಿವು
ಬದುಕು ಬಾವಣೆ
ಪದಗಳೆಲ್ಲ ಸವಕಾಲಾಗಿ
ಪೇಲಾವ ಕವಿತೆಗಳನ್ನೆ
ಮತ್ತೆ ಮತ್ತೆ ಹೇಗೆ ಬರೆಯಲಿ

ಒಲಿದಿದ್ದುಯಾವಗಲೂ
ಆಹ್ಲಾದವಾಗಿರುವುದಿಲ್ಲ
ಒಮ್ಮೊಮ್ಮೆ ತಡಕಾಡಿ
ತಡಬಡಿಸಿ ಬರೆದುಕೊಂಡರು
ಸಪ್ಪೆಯೆನಿಸಿ ಕೈ ಚೆಲ್ಲಿ
ಬೀಡುತ್ತೆನೆ, ಕವಿತೆಯ
ಸಹವಾಸವನ್ನೆ ಬಿಟ್ಟು
ಮತ್ತದೆ ವಿಸ್ಕಿ ಸಿಗರೆಟಿನ
ಕಡೆ ಗಮನ ಹರಿಸುತ್ತೆನೆ

#ಕವಿತೆಯೆಂದರೆ
#ಉತ್ತಮ್

Sunday 23 June 2019

ಅಮ್ಮ

ನಾ ಮೊದಲು ಕಣ್ಬಿಟ್ಟೊಡನೆ
ಕಂಡವಳು
ಅಮ್ಮ

ನಾ ಎದ್ದು ನಿಂತಾಗ
ಕೈ ಹಿಡಿದು
ನಡೆಯಲು ಕಲಿಸಿದವಳು
ಅಮ್ಮ

ಶಾಲೆಯ ಪಾಠಕ್ಕಿಂತ
ಮನೆಯ ಪಾಠ
ಹೇಳಿಕೊಟ್ಟ ಮೊದಲ ಗುರು
ಅಮ್ಮ

ಬದುಕಿನ ಕಲಿಸಿದವಳು
ಸದ್ಗುಣಗಳ
ಹೆಳಿಕೊಟ್ಟವಳು
ಅಮ್ಮ

ನಗುವ ರೂಪ
ಪ್ರೀತಿಯ ಸ್ವರೂಪ
ವಾತ್ಸಲ್ಯದ ಪ್ರತಿರೂಪ
ಅಮ್ಮ

ಅಮ್ಮ ನ ಹೊಗಳಲು
ಅವಳ ಬಗ್ಗೆ ಬರೆಯಲು
ಜಗದ ಎಲ್ಲಾ ಭಾಷೆಗಳು
ಸೋಲುತ್ತವೆ

ಅಮ್ಮ ನ ಹೊಗಳಲು
ನೆಪವಷ್ಟೆ  ಇಲ್ಲಿ
ಅವಳ ಬಗ್ಗೆ
ಹೇಳಲಾಗದ
ಅದೆಷ್ಟೊ
ಮಾತುಗಳು ಉಳಿದಿವೆ
ನನ್ನಲ್ಲಿ

#ಉತ್ತಮ್#
#ಹ್ಯಾಪಿ_ಅಮ್ಮಂದಿರ_ದಿನ

ನೆನಪೆಂಬ ನೋವಿಗೆ

ಕಡೆಗೂ ಯಾರು
ಉಳಿಯಲಿಲ್ಲ ನನ್ನ ಪಾಲಿಗೆ
ಸತ್ಯ ಮಿಥ್ಯ ಎಂಬ
ಬೂದಿ ಮುಚ್ಚಿದ
ಕೆಂಡೊದೊಳಗೆ
ಉರಿದು ಹೋಗಿದ್ದು
ಪ್ರೀತಿ ನಂಬಿಕೆಗಳೆಂದು
ತಿಳಿಯಲೆ ಇಲ್ಲ ನನಗೆ

ಸಂಬಂದಗಳ ಹೋಲಿಕೆ
ಭಾವನೆಗಳ ಆಳಕೆ
ಇಳಿದಿದ್ದು ಪರಿಸ್ಥಿತಿಗಳ
ಮೋಹ ಅಂತಸ್ಥಿಕೆ

ಕೊಟ್ಟು ಪಡೆದುಕೊಳ್ಳುವುದೆಲ್ಲ
ಮಾಮೂಲಿ ಇಲ್ಲಿ
ಕೊಟ್ಟು ಕೇಳಬಾರದು
ಕೇಳಿ ಪಡೆದುಕೊಳ್ಳಬಾರದು
ಕೊಟ್ಟಿದ್ದು ಲೇಕ್ಕ ಇಡಬಾರದು
ಪಡೆದಿದ್ದು ಪೆರಿಸಿ ಇಡಬಾರದು
ಆಗ ನೆನೆಪೆಂಬುದು ಬದುಕು
ಪೂರ್ತಿ ಎದೆಭಾರ ಮಾಡಿಬಿಡುತ್ತದೆ

ಒತ್ತಡ ಹಾಕಿ
ಒತ್ತಯ ಮಾಡಿ
ಪಡೆದುಕೊಂಡಿದ್ಯಾವುದು
ಶಾಸ್ವತವಲ್ಲ
ಇದ್ದಷ್ಟು ದಿನ ನೀನು
ಬದುಕಿದಷ್ಟು ದಿನ
ನಿನ್ನ ನೆನಪು
ನನ್ನೆದೆಯೊಳಗೆ ಬೆಚ್ಚಗೆ
ಉಳಿಯುವುದು

ನನ್ನ ನೋವಿಗೆ
ಕವಿತೆ ಬರೆದು
ಸಮಾಧಾನಿಸಿಕೊಳ್ಳುತ್ತಿದ್ದೆನೆ
ನಿನಗಲ್ಲ ಬೀಡು
ದಾಸನದವನೊಬ್ಬ
ಮೋಸ ಮಾಡಿದನೆಂದು
ಕೋನೆಯವರೆಗೂ
ಕೊರಗಬೇಡ
ಎಂದೊ ಬರೆದ
ಸಾಲಿನ ಕೊನೆಗೊಂದು
ಶ್ರಾದ್ದಂಜಲಿ ಅರ್ಪಿಸಿ
ಮನ್ನಡೆದು ಬೀಡು

#ಉತ್ತಮ್
#ನೆನಪೆಂಬ_ನೋವಿಗೆ

ನೆರಯನೋವಿಗೊಂದು ನಿಟ್ಟುಸಿರು

ಕವಿತೆ ಬರೆಯೊಣವೆಂದುಕೊಂಡರೆ
ಹಾಳೆಗ್ಯಾವ ಅಕ್ಷರವೂ
ಇಳಿಯುತ್ತಿಲ್ಲ
ಮೊದಲೆಲ್ಲ ಬರೆದಿಟ್ಟ
ಕವಿತೆಗಳೆಲ್ಲ
ಪೇಲವವೆನಿಸುತ್ತದೆ

ಮೊನ್ನೆ ಸ್ವರ್ಗದೂರಿಗೆ
ನೆರೆ ಬಂದು ಜೀವ
ಭಯ ಹಸಿವಿನ
ಭೊದನೆ ಮಾಡಿದ್ದು
ಎದೆಯಳೊಗೊಂದು
ತಲ್ಲಣ ಹುಟ್ಟಿಸುತ್ತದೆ

ರಕ್ತವೇನೂ ಹರಿಯಲಿಲ್ಲ
ಕುಸಿದ ಮಣ್ಣು
ಬಿದ್ದ ಇಟ್ಟಿಗೆ ಚೂರು
ಅಹಂ ನೂರಿನ ದಾರಿಯನ್ನು
ಮುಚ್ಚಿದ್ದು ಸುಳ್ಳಲ್ಲ

ಕಣ್ಣಿರ‌್ಯಾವುದು
ಮಳೆನೀರ‌್ಯಾವುದು
ತಿಳಿಯದೆ ಕೈ ಹಿಡಿದು
ಬದುಕಿಸಿದವರಿಗೆ
ಸಂತೃಪ್ತಿ ಯಷ್ಟೆ
ಬೇರ‌್ಯಾವ ನಿರೀಕ್ಷೆಗಳಿಲ್ಲ

ಬಿಸ್ಕೆಟ್ ಎಸೆದವನಿಗೆ
ಇ ನೋವು ಹಸಿವು
ಬರದೆ ಇರಬಹುದು
ಪಡೆದುಕೊಂಡವರ
ಎದೆಯಲ್ಲಿ ಮಾತ್ರ
ಹಸಿವು ನೀಗಿಸಿದವನ
ಕೈಗಳಷ್ಟೆ ನೆನಪು

ಇಲ್ಯಾವುದೆ
ತತ್ವ ಸಿದ್ದಾಂತಗಳು
ಬರಲಿಲ್ಲ
ಮೇಲು ಕೀಳೆಂಬ
ಅಹಂ ನಿಲ್ಲಲಿಲ್ಲ
ಇಲ್ಲೂಳಿದಿದೊಂದೆ
ಕಡೆಗೂ ಮಾನವೀಯತೆ

ಪ್ರವಾಹ ಬರಬಹುದು
ಮತ್ತೆ ನಮ್ಮ ಅಹಂಗಳನ್ನು
ನಿಮ್ಮ ತತ್ವ ಸಿದ್ದಾಂತಗಳು
ಮೇಲು ಕಿಳೆಂಬ
ಮನಸ್ಥಿತಿಗಳು
ಜೋಪಾನ
ಕೊಚ್ಚಿ ಹೋಗುವ
ಮುನ್ನ ಮಲಗೆದ್ದು ಬಿಡಿ

#ಉತ್ತಮ್
#ನೆರೆಯನೊವಿಗೊಂಚುರು_ನಿಟ್ಟುಸಿರು

ಪೂರಣವಿರಾಮ

ದಿನವು ನೂರಾರು ಕವಿತೆಗಳು
ಗರ್ಭ ಕಟ್ಟುತ್ತವೆ
ಶಾಯಿಇಲ್ಲದೆ ಹಾಳೆ ಸಿಗದೆ
ಗರ್ಭಪಾತವಾಗುತ್ತವೆ

ಹೆಣ್ಣಿಗೊಂದು ಕಣ್ಣಿಗೊಂದು
ಆಸೆಗೆ ಭಾಷೆಗೆ
ನೋವಿಗೆ ನಲಿವಿಗೆ
ಹುಟ್ಟಿಗೊಂದು ಕಾರಣಬೇಕಷ್ಟೆ

ಭಾವನೆಗಳ ಪಕ್ಕ
ಆಶ್ಚರ್ಯಕರ ಚಿಹ್ನೆ !
ಸ್ನೇಹಕ್ಕೆ ಕಾಮ,
ಕಡೆಗೆ ಪ್ರೇಮಕ್ಕೆ
ಪೂರ್ಣ ವಿರಾಮವಿಟ್ಟು
ಎದೆಯೊಳಗೆ ಕವಿತೆಗೊಂದು
ಅಂತ್ಯ ಕಾಣಿಸುತ್ತೇನಷ್ಟೆ

#ಉತ್ತಮ್
#ಮುಗಿಯದ_ಕವಿತೆ

ಹೂ ಹೆಸರಿನ ಗೆಳತಿಗೆ ೨

#ಹೂ_ಹೆಸರಿನ_ಗೆಳತಿಗೆ

ಅನಿರೀಕ್ಷಿತ ತಿರುವಿನಲ್ಲಿ
ನೀರಿಕ್ಷಿತವಾಗಿ ಸಿಕ್ಕವಳ
ಹೆಸರಿನಲ್ಲಿ ಘಮವಿದೆ

ಸ್ನೇಹ ನಿಡುತ್ತೆನೆಂದವಳು
ಬದುಕ ತೆರಿದಿಟ್ಟ
ಪರಿಗೆ ಎದೆಯ
ತುಂಬ ಖುಷಿಯಿದೆ

ಸ್ನೇಹ ಪ್ರೀತಿ
ರಕ್ತ ಸಂಬಂಧಗಳ
ಮೀರಿ ನಿಂತವಳು
ಅವಳು, ಹೇಸರೇನು
ಬೇಕಿಲ್ಲ ಭಾವನೆಗೆ

ನಕ್ಕರೆ ನಗೆ ಮಲ್ಲಿಗೆ
ಸಿಡುಕಿದರೆ ಮೂಗು
ಕೆಂಡ ಸಂಪಿಗೆ
ಮುಂದುವರೆಯಲಾರೆ
ಅವಳ ಅಂದ ಹೊಗಳಲು
ಪದಗಳೆಲ್ಲ ಸವಕಲು

ನಗುವಿನೂರಿನ ಮಹಾರಾಣಿ
ಅಂದದೂರಿಗೆ ಯುವರಾಣಿ
ನಗುವ ಮರೆಯದಿರು
ಖುಷಿಯ ನಿಡುತ್ತಿರು
ನನ್ನಳಗೆಂದು ಎಂದೆದು

#ಉತ್ತಮ್

ಹೂ ಹೆಸರಿನ ಗೆಳತಿಗೆ

#ಹೂ_ಹೆಸರಿನ_ಗೆಳತಿಗೆ

ಪ್ರೇಮದೂರಿನ ದಾರಿಯಲಿ
ನನಗೆಂದೆ ಸಿಕ್ಕವಳು
ಅಪರೂಪದ
ಹೂವಿನಂತವಳು

ಬೊಗಸೆ ತುಂಬ
ಪ್ರೀತಿ
ಮನಸ್ಸ ತುಂಬ
ಸ್ನೇಹ
ಬದುಕಿನ ಉಳಿದ
ಸಂಬಂಧಗಳ
ಮರೆಸಿದವಳು

ಪ್ರೀತಿಯ ರೀತಿಯ
ಬದಲಿಸಿದೆ
ನನ್ನೊಳಗೆ ನೀನು
ಎಲ್ಲಾ ಮೋಹಕತೆಯ
ಬಂಧಗಳನ್ನು ಮರೆತು
ಬಿಟ್ಟೆ ನಿನ್ನಿಂದ
ನಾನು

ಮಾತನಾಡಿದರೆ
ಅತಿ ಮುದ್ದು
ನಿನೊಮ್ಮೆ ನಕ್ಕರೆ
ಮರೆತೆ ಬಿಡುವೆ
ಉಳಿದೆಲ್ಲ ಸದ್ದು
ಮರಯಾಲಾರೆ
ಹುಸಿಕೋಪದಿಂದ
ನೀ ಕೊಟ್ಟ ಗುದ್ದು

ಜೋತೆ ಸೇರುವೆವೋ
ಸೇರಲಾರೆವೂ
ತಿಳಿದಿಲ್ಲ ನನಗೆ
ಜನ್ಮಂತರದ ಕಲ್ಪನೆ
ನಿಜಾವದರೆ
ಇನ್ನೊಂದು ಜನ್ಮವಾದರೂ
ನಿನ್ನೊಂದಿಗೆ ಬದುಕೆವೆನು

#ಉತ್ತಮ್

ಕವಿತೆ

ನಿನ್ನ ಎದೆಯ ಮೇಲಿನ
ಸೀರೆಯಂಚಿನಲಿ
ನನ್ನ ಪೋಲಿ ನೋಟಗಳು
ಚಲಿಸುತ್ತಿವೆ
ಬೆನ್ನ ಮೇಲಿನ ಖಾಲಿ ಜಾಗದಲಿ
ಆಸೆ ಕನಸುಗಳು
ಚಿಗುರೊಡೆಯುತ್ತಿವೆ
ನಿಳ ಕೊರಳಿಗೆ
ಮೌನ ಚಂಛೆಗಳು
ಸರವಾಗಿ ಜೋತು ಬಿದ್ದಿವೆ
ಬಳುಕೊ ಸೊಂಟವು
ನನ್ನ ಶೃಂಗರದ ಡಾಬು
ಬಿಗಿ ಗೊಳಿಸಿದೆ
ನಿನ್ನ ಕೋಮಲ
ಪಾದಗಳ ಕೆಳಗೆ
ನನ್ನ ಸಾಚತನವು
ಸಿಲುಕಿ ನಲುಗುತ್ತಿದೆ

     #ಉತ್ತಮ್#

ಕವಿತೆ

ಯಾವ ಹೂವು
ಅರಳುವ ಮುನ್ನ
ಯಾವ ನೀರಿಕ್ಷೆಯನ್ನು
ಪಕಳೆಯಲ್ಲಿಟ್ಟುಕೊಂಡು
ಅರಳುವುದಿಲ್ಲ

ದೇವರ ತಲೆಗೊ,
ಪಾದಗಳಡಿಗೊ
ಸತ್ತವನೆದೆಗೊ
ಉರಿಯುವ ಚಿತೆಗೊ
ರಾಜಕಾರಣಿ, ಕಲಾವಿದ,
ಸಾಹಿತಿಯ ಎದೆಯ ಮೇಲೊ
ದಾರ ಕಟ್ಟಸಿಕೊಂಡು ಬೀಳಬಹುದು

ಹೆಣ್ಣಿನ ಅಂದದ
ಕೂದಲ ಶೃಂಗಾರಕ್ಕೊ
ಹುಡುಗಿಯನೊಲಿಸಲು
ಹುಡುಗನ ಕೈಯ
ಒಲುಮೆಯಲ್ಲೊ
ಅತಿಥಿಯ ಖುಷಿ
ಪಡಿಸಲು ಟೆಬಲ್ಲಿನ
ಹೂಜಿಯೊಳಗೆ ನಗುತ್ತಲೂ
ಕೂರಬಹುದು

ಮಕರಂದ ಹಿರಲು
ಬಂದ ದುಂಬಿಯ
ಸ್ಪರ್ಶದಲ್ಲಿ
ಮಳೆಯ ಹನಿಗಳನ್ನು
ಒಡಲೊಳಗಿಟ್ಟು
ಮುತ್ತಗಿಸುವಲ್ಲಿ
ಸೂರ್ಯನ ಶಾಖಕ್ಕೆ
ಮಾಜಿ ಹೋಗುವಲ್ಲಿಗೆ
ಹೂವಿನ ಸಂತೃಪ್ತಿ
ಮುಗಿಯಾಬಹುದು

ಅದೃಷ್ಟವೆಂಬುದು
ಹೂವಿಗೂ
ಸಹಜವಿರಬಹುದು
ಗಿಡ ತಂದು ನೆಟ್ಟವರ
ಅಭಿಲಾಷೆಗಳು
ಏನಿರಬಹುದೊ
ಬೇರಿಗೆ ನೀರುಣಿಸಿದವರ
ಆಕಾಂಕ್ಷೆ ಹೂವಿಗೂ
ತಿಳಿದಿರುವುದಿಲ್ಲ
ಹೂ ಕಿತ್ತವರು ಮಾತ್ರ
ನಿರ್ದಿಷ್ಟ ಮುಕ್ತಿ ತೋರಿಸುತ್ತರೆ

#ಉತ್ತಮ್
#ಹೂ_ಬದುಕಿನ_ಸಾಲು
#un_pluged