Saturday 28 May 2016

ವಯಸ್ಸಿಗೆ ಬದಲಾಗೊ ಆಧ್ಯಾತ್ಮ

ಭಕ್ತಿ ಆಧ್ಯಾತ್ಮ ಅನ್ನುವ ವಿಷಯಗಳು ಮನುಷ್ಯನ ಸುಕ್ಷ್ಮವಾದ ಭಾವನೆಗಳು, ಮನುಷ್ಯ ಭಕ್ತಿಯ ಮುಖಂತರ ನಂಬಿಕೆಯನ್ನು ಕಂಡುಕೊಳ್ಳುತ್ತಾನೆ ನೆಮ್ಮದಿಯನ್ನು ಹುಡುಕುತ್ತಾನೆ, ಹಾಗಾಗಿಯೇ ಇಂದು ಭಕ್ತಿ ಆಧ್ಯಾತ್ಮ ಎಂಬ ವಿಷಯಗಳು ವ್ಯಾಪಾರವಾಗುತ್ತಿದೆ. ಅದೇನೆ ಇರಲಿ ಈ ಭಕ್ತಿ ಅನ್ನೋ ಭಾವನೆ ಮನುಷ್ಯನ ವಯಸ್ಸಿಗೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ
   ಬಾಲ್ಯದಲ್ಲಿ ದೇವರು ಅಂದ್ರೆ ಅದೇನೋ ಭಯ, ದೇವರಿಗೆ ನೈವೇದ್ಯ ಮಾಡ್ದೆ ಪ್ರಸಾದ ತಿಂದ್ರೆ ದೇವರು ಮೂಗು ಕುಯ್ಯುತ್ತೆ ಅಂತ ದೊಡ್ಡವರು ಹೆದರಿಕೆ ಹುಟ್ಟಿಸ್ತ. ಇದ್ರೂ ಆದ್ದರಿಂದ ನಾವ್ಯರು ಪೂಜೆಗೆ ಮುನ್ನ ಆಸೆ ಇದ್ರೂ ಪ್ರಸಾದಕ್ಕೆ ಕೈ ಹಾಕ್ತಾ ಇರಲಿಲ್ಲ, ದೇವರು ಅಂದ್ರೆ ಕಷ್ಟದಲ್ಲಿ ಕಾಪಡೊ ಸೂಪರ್ ಪವರ್, ಆತ ಮಿರಕುಲ್ ಮ್ಯಾಜಿಕ್ ಎಲ್ಲಾ ಮಾಡಬಲ್ಲ ಮಾಯವಿ ಅನ್ಕೊತಿದ್ವಿ ಹಾಗಾಗಿಯೇ ಹೊಮ್ ವರ್ಕ್ ಕೊಟ್ಟ ಟೀಚರ್ ಹೊಮ್ ವರ್ಕ್ ನೋಡೋಕೆ ಆ ದಿನ ಕ್ಲಾಸ್ ಗೆ ಬರದೆ ಇರೊ ಹಾಗೆ ಮಾಡಪ್ಪ , ಮಾಡಿದ ತಪ್ಪಿಗೆ ಅಮ್ಮ ಹೊಡಿದಿರೊ ಹಾಗೆ ಮಾಡಪ್ಪ ಅಂತ ಬೇಡ್ಕೊತಿದ್ವಿ
     ಸ್ವಲ್ಪ ದೊಡ್ಡವರ ಆದ್ವಿ ಆಗ  ಮೈ ಮೇಲೆ ಬರೊ ದೇವ್ರು ಕಣ್ಣೆ ಎದ್ರಿಗೆ ಮ್ಯಾಜಿಕ್ ಮಾಡೊ ದೇವ್ರು ನಾನು ಪಾಸೊ ಫೆಲೊ ಅಂತ ಬಾಯಿಬಿಟ್ಟು ಹೇಳೊ ದೇವ್ರು ಅಪ್ಪಣೆ ಕೊಡೊ ದೇವ್ರು ಇವೆಲ್ಲ ಪರಿಚಯ ಅದವು ಅಷ್ಟೆ ಅಲ್ಲಾ ಆ ದೇವ್ರುಗಳು ನಮ್ಮ. ಇಷ್ಟ ಕಷ್ಟ ಕೂಡ ಆದವು
    ಇ ಕಾಲೇಜು ಹರೆಯ ಅಂತ ಬಂದ್ಮೆಲೆ ಸ್ವಲ್ಪ ದೇವ್ರುನ ಮರಿಯೋಕೆ ಶುರು ಮಾಡಿದ್ವಿ ಅನ್ಸುತ್ತೆ ದೇವ್ರು ಭಕ್ತಿ ಪೂಜೆ ಅಂತ ಅಮ್ಮ ಅಪ್ಪ ಅಂದ್ರೆ ಎಲ್ಲಿದ್ದಾನೆ ದೇವ್ರು ಅವೆಲ್ಲ ಸುಳ್ಳು ಅಂತ ಅಪ್ಪಟ ನಾಸ್ತಿಕರ ತರ ಮಾತಡೊಕೆ ಸುರುಮಾಡಿ ಬಿಡ್ತಿವಿ.ಆದ್ರೂ ಎಕ್ಸಾಂ ಲವ್ ವಿಷಯಕ್ಕೆ ಎಷ್ಟೇ ದೇವ್ರು ಗೆ ಬೈದಿದ್ರೂ ಮತ್ತೆ ಅಷ್ಟೆ ಭಕ್ತಿಯಿಂದ ಬೆಡ್ಕೊಬಿಡ್ತ ಇದ್ವು.
  ಇ ಕಾಲೇಜು ಹರೆಯ ಎಲ್ಲಾ ಮುಗ್ಧ ಮೇಲೆ ಕೆಲಸ ಹುಡುಕೊಂಡ್ ಹೊರಟಾಗ ದೇವ್ರು ಬೇಕೆ ಬೇಕು ಇನ್ನು ಕೆಲ್ಸ ಸಿಕ್ಕಿದ ಮೇಲೆ ಕಷ್ಟ ಸಾಲ ಊಟದ ಬೆಲೆ ಎಲ್ಲಾ ಗೊತ್ತಗಿರುತ್ತೆ, ಆಗ ಅದೆ ದೇವ್ರು ಕಾಯಕವೇ ಕೈಲಾಸ ಆಗ ಪ್ರತಿವಾರ ಬಂದು ದೇವಾಸ್ಥಾನ ಇಂತಿಷ್ಟೆ ಅಂತ ಕಾಣಿಕೆ ಕೆಲವು ಹರಕೆ ಹಣ್ಣು ಕಾಯಿ ವಿಶೇಷ ಪೂಜೆ ಅಂತ ನಮ್ಮಿಂದ ದೇವರಿಗೆ ಸಂದಾಯ ಆಗುತ್ತೆ.
   ಒಂದು ಮದುವೆ ಅಂತ ಆದ ಮೇಲೆ ಶುರುವಾಗೊದು ನಿಜವಾದ ಮೌಲ್ಯಯುತವಾದ ಭಕ್ತಿ, ಆದ್ಯತ್ಮ ಅನೋದು ಮನುಷ್ಯನ  ಜೀವನದಲ್ಲಿ ಶುರು ಆಗೋದು. ದೇವರು ಅಂದ್ರೆ ನಂಬಿಕೆ ನೆಮ್ಮದಿ  ಧ್ಯಾನ ಅಂತ ಅರ್ಥ ಆಗಿ ಬಿಡುತ್ತೆ. ಮನೆಯ ಜಂಜಾಟಗಳು ನೋವುಗಳು ಕಷ್ಟಗಳಿಂದ ಮುಕ್ತಿ ಪಡೆಯಲು ಒಂದು ದೇವಾಸ್ಥಾನ ಇಲ್ಲಾ ಒಬ್ಬ ದೇವ ಮಾನವನನ್ನು ಅವರೆ ಆಯ್ಕೆಮಾಡಿಕೊಂಡು ಬಿಡುತ್ತಾರೆ ಇವರ ಹರಕೆ ಕಾಣಿಕೆಗಳೆಲ್ಲವೂ ಕ್ಷಣಿಕ, ಕಷ್ಟ ಪರಿಹಾರಕ್ಕಾದ್ರೂ ಅದರ ಮೂಲ ಉದ್ದೇಶ. ಮಾತ್ರ ನೆಮ್ಮದಿ ಪಡೆಯೊದು.
   ಇನ್ನೂ ವಯಸ್ಸಾದಂತೆಲ್ಲಾ ರಾಮ ಕೃಷ್ಣ ಅಂತ ಕಾಡು ಸೆರಿಕೊಳ್ಳೊದು ಅಂತಾರೆ ಅವರು ಎಲ್ಲಾ ದೇವ್ರು, ದೇವಮಾನವರನ್ನು ನೋಡಿ ಬಿಟ್ಟಿರುತ್ತಾರೆ ಅವರಿಗೆ ದೇವ್ರು ದೇವ ಮಾನವನಿಗಿಂತ ಹೆಚ್ಚಾಗಿ ನೆಮ್ಮದಿ ಶಾಂತಿ ಬೇಕಾಗಿರುತ್ತೆ ಹಾಗಾಗಿ ಅವ್ರು ಮಾಡಿದ ಪಾಪಗಳೆಲ್ಲ ಕಳೆದು ಪುಣ್ಯ ಸಂಪಾದಿಸಲು ತೀರ್ಥ ಯಾತ್ರೆ ಹೊರಟು ಬಿಡ್ತಾರೆ.
    ವಯಸ್ಸಿಗೆ ಬದಲಾಗೊ ಭಕ್ತಿ ಇಂದು ಸಾಕಷ್ಟು ಬದಲಾವಣೆ ಕಂಡಿದೆ ವಿಜ್ಞಾನದ ಮೂಲಕ ಸಾಕಷ್ಟು ಪವಾಡಗಳನ್ನು ಸೃಷ್ಟಿ ಮಾಡುವ ಮನುಷ್ಯನಿಗೆ ದೇವರ ಯಾವುದೆ ಪವಾಡಗಳು ಬೇಕಾಗಿಲ್ಲಾ ಆತನಿಗೆ ಬೇಕಾಗಿರುವುದು ನೆಮ್ಮದಿ ಮತ್ತು ಶಾಂತಿ ಹಾಗಗಿಯೆ ಇಂದು ಅನೇಕ ದೇವ ಮಾನವರು ಮಠ ಮಂದಿರಗಳು ನೆಮ್ಮದಿ ಶಾಂತಿ ನೀಡುತ್ತವೆ ಎಂದು ವ್ಯಾಪಾರಕ್ಕಿಳಿದಿವೆ ಧ್ಯಾನ ಯೋಗ ಸೆಂಟರ್ ಗಳು ಹುಟ್ಟಿ ಕೊಂಡಿವ. ಮನುಷ್ಯ ಅವುಗಳಿಂದ ನೆಮ್ಮದಿ ಪಡೆಯಲು ಹೋಗಿ ಇರುವ ನೆಮ್ಮದಿಯನ್ನು ಕಳೆದುಕೊಳ್ಳುತಿದ್ದಾನೆ. ಅದೇನೆ ಇರಲಿ ಅವರವರ ದೆವ್ರು ಭಕ್ತಿ ಅನ್ನೊ ಭಾವನೆ ಅವರ ಅವರಿಗೆ ಮಿಗಿಲು,ಅವರ ಪೂಜೆ ಅವರಿಗೇ ಶ್ರೇಷ್ಠ. ನಿಮ್ ದೆವ್ರು ನಿಮ್ಗೆ ನೆಮ್ದಿ ಕೊಡ್ಲಪ್ಪ .

ಉತ್ತಮ್ ದಾನಿಹಳ್ಳಿ