Saturday 14 January 2017

ಕವಿತೆ

ಸೂರ್ಯ ಪಥ
ಬದಲಾಯಿಸಿದನಂತೆ
ಲೋಕದ ಕತ್ತಲೆಯಲ್ಲಿ
ಬದುಕು ಮಗ್ಗಲು
ಬದಲಾಯಿಸಿದ್ದು
ಅರಿವಾಗದಂತೆ
ನಿದ್ದೆ ಹೋಗಿರುವ
ಅಮಾಯಕರು ನಾವು

ಅದ್ಯಾವುದೋ
ಎಡಬಲಗಳ
ನಡುವಲ್ಲಿ
ಉಳಿದವನು
ಮತಿಭ್ರಮಣನಾಗಬಹುದು

ಆಸ್ತಿಕತೆ  ನಾಸ್ತಿಕತೆಯ
ದ್ವಂದ್ವದೊಳಗೆ
ದೇವರೇ ನಂಬಿಕೆ
ಕಳೆದುಕೊಳ್ಳಬಹುದು

ಶರವೇಗದ ಬದುಕಿದು
ಸರತಿ ಸಾಲಿನಲ್ಲಿ
ನಿಧಾನವಾಗಿ ಚಲಿಸಿ
ನೆಮ್ಮದಿ ಪಡೆದುಕೊಳ್ಳಬೇಕು

#ಉತ್ತಮ್#

ಕವಿತೆ

ಆತ ಕವಿಯಾಗಿದ್ದೆ
ಅವಳಿಂದ ಅವಳ
ಪರಿಚಯಕ್ಕೊಂದು
ಕವನದಿಂದ ಸುರುವಾಗಿ
ಅವಳಂದಕ್ಕೆ ಇಷ್ಟಕ್ಕೆ ಕಷ್ಟಕ್ಕೆ
ಪ್ರೀತಿಗೆ ನಗುವ ರಿತಿಗೆ
ಒಮ್ಮೊಮ್ಮೆ ಅವಳ ನೋವಿಗೆ
ಅವಳ ಖುಷಿಗೆ ಮಹಾ
ಕಾವ್ಯಗಳನ್ನೆ ಸೃಷ್ಠಿಸಿಬಿಟ್ಟ
ಅವಳು ದೂರಾದ ಮೇಲೆ
ಬರಿ ವಿರಹದಲ್ಲೆ ಕಾರಿಕೊಂಡ
ಹೃದಯ ಭಗ್ನವಾಗಿ
ಕನಸು ಛಿದ್ರವಾಗಿ
ಅವನೆಲ್ಲಿ ಹೋದನೊ ಸಿಗುತ್ತಿಲ್ಲ

#ಉತ್ತಮ್#

ಕವಿತೆ

ಖಾಲಿಯಾದ ಮಧು
ಬಟ್ಟಲು ಹಂಗಿಸುತಿತ್ತು
ನನ್ನೊಳಗಿರುವ ಮಧುವು
ಖಾಲಿಯಾಗುತ್ತದೆ
ನಿನ್ನೆದೆಯೊಳಗಿರುವ
ಅವಳ ನೆನಪು
ಖಾಲಿಯಾಗುವುದಿಲ್ಲವೆಂದು

#ಉತ್ತಮ್#

ಕವಿತೆ

ನೀನಿರದೆ ಈ
ರಾತ್ರಿಗಳು ನಿರ್ಜೀವವಾಗಿವೆ
ಎದೆಯ ಬೀದಿಯಲ್ಲಿ
ಹುಟ್ಟುವ ಮೌನ
ಗದ್ದಲಗಳ ಸದ್ದಡಗಿದೆ
ಚಂದ್ರನೇಕೊ ಮಂಕಾಗಿ
ಮೋಡದ ಮರೆಗೆ
ಸರಿದಿದ್ದಾನೆ
ಈ ಚಳಿಯ ಕೊರೆತ
ಇನ್ನಷ್ಟು ಮೊನಚಾಗಿ
ಎದೆಯ ಚುಚ್ಚುತ್ತಿದೆ
ಈ ದೀರ್ಘ ರಾತ್ರಿ
ಮುಗಿಯುವ ಮುನ್ನವೆ
ಬಂದುಬಿಡು
ಬೆಳಗಾದರು ನನ್ನ ಪಾಲಿಗೆ
ಸುಂದರವಾಗಲಿ

#ಉತ್ತಮ್#