Wednesday 17 April 2013

ಅಪರಿಚಿತರು ಪರಿಚಿತರಾಗಿ






ಅವರು ಅನಿರಿಕ್ಷಿತವಾಗಿ ಬದುಕಿಗೆ ಜೊತೆಯಾಗಿ ಬಿಡುತ್ತಾರೆ. ಮಾಸದ ನೆನಪುಗಳನ್ನು ಉಳಿಸಿಹೋಗಿ ಬಿಡುತ್ತಾರೆ. ಹೀಗೆ ಕಾಣಿಸಿಕೊಂಡು ಹಾಗೇ ಮರೆಯಾಗುತ್ತಾರೆ. ಎಲ್ಲೋ ಕೆಲವೊಮ್ಮೆ ಮಾತ್ರ ಬದುಕಿನ ಕೊನೆಯತನಕ ಜೊತೆಯಾಗಿ ಬಿಡುತ್ತಾರೆ.
 ಯಾಕೆ ಹೀಗೆ?  ಯಾವ ಕಾರಣ ಅಥವಾ ಉದ್ದೇಶವನ್ನಿಟ್ಟುಕೊಂಡು ಅವರು ನಮ್ಮೊಂದಿಗೆ ಹಾಗೆ ನಡೆದುಕೊಂಡರು? ಯಾಕೆ ನಮಗೆ ಸಹಾಯ ಮಾಡಿದರು? ಎಂದು ಕೇಳಿಕೊಂಡು ನೋಡಿ ಉಹೂಂ, ನಿಮಗೆ ಉತ್ತರ ಸಿಕ್ಕುವುದಿಲ್ಲ ಸಿಗಲಿಕ್ಕೆ ಏನಾದರೂ ಕಾರಣವಿರಬೇಕು ತಾನೇ? ಕಾರಣವೇ ಇರುವುದಿಲ್ಲ. ಅವರು ತಾವು ಮಾಡಿದ ಕೆಲಸದಿಂದ ನಮ್ಮ ಬದುಕಿನ ಒಂದು ಮಧುರ ಭಾಗವಾಗಿ ಉಳಿದುಬಿಡುತ್ತಾರ. ಅದು ನೆನಪಾದಾಗಲೆಲ್ಲ ಅವರು ಈಗ ಜೊತೆಗಿರಬೇಕಿತ್ತು ಎನ್ನುವ ಮಧುರ ಯಾತನೆಗೆ ಕಾರಣವಾಗಿ ಬಿಡುತ್ತಾರೆ.
ನೀವು ಯಾವುದೋ ಕೆಲಸಕ್ಕೆಂದು ಮೊದಲ ಬಾರಿ ಊರಿಗೆ ಹೊರಟಿರುತ್ತೀರಿ, ನಿಮಗೆ ಊರಿನ ಬಗ್ಗೆ ಏನೆಂದರೆ ಏನು ಗೊತ್ತಿರುವುದಿಲ್ಲ.ಮುಚ್ಚಿದ ಕಣ್ಣನ್ನು ಮೊದಲ ಬಾರಿ ತೆರೆದಾಗ ಎಂತಹ ಅನುಭವವಾಗುತ್ತದೋ ಅಂತಹದ್ದೇ ಈಗ ಊರು ನಿಮ್ಮ ಪಾಲಿಗೆ. ನೀವು ಇಷ್ಟು ಗಂಟೆಗೆ ತಲುಪಬೇಕೆಂಬ ಅಂದಜಿಟ್ಟುಕೊಂಡು ಬಸ್ ಹತ್ತಿರುತ್ತಿರಿ. ಆದರೆ ದಾರಿಯಲ್ಲಿ ಬಸ್ ಹಾಳಾಗುತ್ತದೆ. ಬೇರೆ ಬಸ್ಸಿಗಾದರು ಹೋಗೋಣ ಎಂದರೆ ದಾರಿಯಲಿ ಸದ್ಯಕ್ಕೆ  ಯಾವ ಬಸ್ಸು ಬರುತಿರುವುದಿಲ್ಲ ಹಾಳಾದ  ಬಸ್ ರೆಪೆರಿಯಾಗಿ ಅದು ನಿಮ್ಮ ಪಾಲಿನ ಹೊಸ ಊರನ್ನು ತಲುಪುವಾಗ ರಾತ್ರಿ ಎಂಟಗಿರುತ್ತದೆ! ನಿಮ್ಮ ಅಂದಾಜಿನಂತೆ  ಅದು ಬೆಳಕಿರುವಾಗಲೇ, ಅಂದರೆ ಸಂಜೆ ಐದು ಗಂಟೆಯೊಳಗೆ ತಲುಪ ಬೇಕಿರುತ್ತದೆ. ಹಗಲಿನಲ್ಲಿ ಯಾವ ಅಪರಿಚಿತ ಊರು, ವ್ಯಕ್ತಿಗಳು ಅಷ್ಟೊಂದು ಭಯ ಹುಟ್ಟಿಸುವುದಿಲ್ಲ ಆದರೆ ರಾತ್ರಿಯ ಕಥೆ ಹಾಗಿರುವುದಿಲ್ಲ.
ಮುಂದೇನು ಎಂದು ನೀವು ಯೋಚಿಸುತ್ತಾ ಇದ್ದಾಗಲೇ, ಬಸ್ಸಿನಲ್ಲಿ ನಿಮ್ಮ ಪಕ್ಕದಲ್ಲಿ ಕುಳ್ಳಿತ ವ್ಯಕ್ತಿ ನಿಮ್ಮ ಜೊತೆ ಮಾತಿಗಿಳಿಯುತ್ತಾರೆ. ನೀವು ಅವನನ್ನು ಒಂದು ಬಗೆಯ ಅನುಮಾನದಿಂದಲೇ ನೋಡಿ, ಮಾತನಾದಿಸುತೀರಿ. ಮೆಲ್ಲಗೆ ನಾನು ಇದೆ ಮೊದಲ ಬಾರಿ ಊರಿಗೆ ಹೋಗುತ್ತಿರುವುದು ಎಂದು ಹೇಳುತ್ತಿರಿ.ಆಗ ವ್ಯಕ್ತಿ ನಾನು ನಿಮ್ಮ ಜೊತೆಗಿರುತ್ತೇನೆ ಭಯ ಪಡಬೇಡಿ ಎಂದು ಹೇಳಿ, ಬುಸ್ಸಿಳಿದವನು ನಿಮ್ಮನ್ನು ಒಂದೊಳ್ಳೆಯ ಲಾಡ್ಜಿಗೆ ಕರೆದುಕೊಂಡು ಹೋಗಿ, ನಿಮ್ಮನ್ನು ಅಲ್ಲಿ ಬಿಟ್ಟು ತಿಂಡಿ ಊಟ ವೆಲ್ಲ ಎಲ್ಲೆಲ್ಲಿ ಸಿಗುತ್ತದೆ,  ಬೆಳಿಗ್ಗೆ  ನೀವು ಕೆಲಸಕ್ಕೆ ಹೋಗಬೇಕಾದ ಜಾಗಕ್ಕೆ ಹೋಗಲು ಬಸ್ಸು ಓಳ್ಳೆಯದೋ, ಆಟೋ ಒಳ್ಳೆಯದೋ, ಎಂದೆಲ್ಲ ವಿವರ ಕೊಟ್ಟು Good Night ಹೇಳಿ ಹೋಗಿ ಬಿಡುತ್ತಾರೆ!!!!
 ಆಗಷ್ಟೆ ಪರಿಚಯವಾಗಿ ನಿಮ್ಮ ಜೀವದ ಗೆಳೆಯನಂತೋ, ಹತ್ತಿರದ ನೆಂಟನಂತೆಯೋ ಇಷ್ಟೆಲ್ಲ ಸಹಾಯ ಮಾಡಿದ ಅವನು ನಿಮಗೆ ಯಾಕೆ ಸಹಾಯ ಮಾಡಿದ ಎಂದು ನಿಮ್ಮನ್ನು ನೀವು ಕೇಳಿಕೊಂಡು ನೋಡಿ, ಅದಕ್ಕೆ ಯಾವ ಕಾರಣವು ಕಾಣಿಸುವುದಿಲ್ಲ ಅವನು ಇದು ತನ್ನ ಕರ್ತವ್ಯವೇನೋ ಎನ್ನುವಂತೆ ಅಥವಾ ಇದು ನನಗೆ ಸಿಕ್ಕ ಅದೃಷ್ಟವೆಂಬಂತೆ ನಿಮಗೆ ಸಹಾಯ ಮಾಡಿ, ಏನೆಂದರೆ ಏನು ನೀರಿಕ್ಷಿಸದೇ ಕತ್ತಲಲ್ಲಿ ಕಣ್ಮರೆಯಾಗಿಬಿದುತ್ತಾರೆ. ಕೊನೆಗೆ ನಿಮಗೆ ತನ್ನ ಪುಟ್ಟದೊಂದು ಕಾಂಟಾಕ್ಟ್ ನ್ನು ಕೂಡ ಕೊಟ್ಟು ಹೋಗಿರುವುದಿಲ್ಲ,ನೀವು ನಿಮ್ಮ ಜೀವನದಲ್ಲಿ ಏನನ್ನು ಮರೆತರೂ, ಹೀಗೆ ನಿಮ್ಮ ಬದುಕಿಗೆ ಅನಿರೀಕ್ಷಿತವಾಗಿ ಬಂದು, ಮರೆಯಲಾಗದಂತಹ ಸಹಾಯ ಮಾಡಿದ ವ್ಯಕ್ತಿಯನ್ನು ಮಾತ್ರ ಮರೆಯಲಾರಿರಿ. ಮರೆತುಬಿಟ್ಟೆ ಎಂದುಕೊಂಡರೂ, ಯಾವುದೋ, ಒಂದು ಕ್ಷಣದಲ್ಲಿ ಅವರು ನೆನಪಾಗಿ ಕಾಡಿ ಬಿಡುತ್ತಾರೆ. ಅವರ  ಕಾಂಟಾಕ್ಟ್ ಈಗಲೂ ಇರಬೇಕಿತ್ತು ಎಂದು ಪರಿತಪಿಸುವಂತೆ ಮಾಡಿಬಿಡುತ್ತಾರೆ.
  ನಮ್ಮ ಬದುಕೆಂಬ ಪಯಣದ ವಿಚಿತ್ರಗಳೆ ಹೀಗಿರುತ್ತವೆ! ನಾವು ಬಸ್, ಟ್ರೈನ್ ಅಥಾವ ವಿಮಾನದಲ್ಲಿ ಪ್ರಯಾಣಿಸುವಾಗ,ಪರವೂರಿನಲ್ಲಿ ವಿದ್ಯಾಭ್ಯಾಸ, ಕೆಲಸಕ್ಕೆಂದು ಹೋದಾಗ, ಯಾವೂದೋ ಆಸ್ಪತ್ರೆ ಅಂಗಡಿಗಳಲ್ಲಿ, ಕೆಲವೊಮ್ಮೆ  ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ, ಇನ್ನು ಕೆಲವೊಮ್ಮೆ ಈಗ ನಮ್ಮನ್ನು ಹಚ್ಚಿಕೊಂಡಿರುವ ಮೊಬೈಲ್   ಮಿಸ್ ಕಾಲ್ ಮೆಸಜ್ ಗಳ  ಮೂಲಕ ಹಾಗೂ ಸಾಮಾಜಿಕ ತಾಣಗಳ ಮೂಲಕ ಹೀಗೆ ಕಾರಣವಿಲ್ಲದೇ ಕಾಣಿಸಿಕೊಂಡು ಕೈ ಹಿಡಿಯುವ ವ್ಯಕ್ತಿಗಳು ನಮ್ಮ ಬದುಕಿನ ಪುಟಗಳಿಗೆ ಸೇರಿಕೊಂಡು ಬಿಡುತ್ತಾರೆ.ಇದರಲ್ಲಿ ಎಲ್ಲೊ ಕೆಲವರು ಮಾತ್ರ ನಮ್ಮ ಬದುಕಿನುದ್ದಕ್ಕೂ  ಜೋತೆಯಗಿರುತ್ತಾರೆ ಬಿಟ್ಟರೆ, ಹೆಚ್ಚಿನವರು ಮಿಂಚಿ ಮರೆಯಾಗುವ ನಕ್ಷತ್ರ ಗಳಷ್ಟೇ!  
    ಆದರೆ ನಾವು ಇಂತಹವರನ್ನು ಎಷ್ಟರ ಮಟ್ಟಿಗೆ ಲೆಕ್ಕಕ್ಕೆ ತೆಗೆದುಕೊಳುತ್ತೇವೆ? ಇವರ ಪ್ರೀತಿಯನ್ನು ನಿಷ್ಕಲ್ಮಶ ಎಂದು ಒಪ್ಪಿಕೊಳುತ್ತೇವೆ? ಇವತ್ತು ನಾವೆಲ್ಲರೂ ಒಂದು ಭಯ ಮತ್ತು ಅನುಮಾನದ ನಡುವೆಯೇ ಬದುಕುತ್ತಿದ್ದೇವೆ. ಯಾರಾದರೂ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದರೆ ಅದರ ಹಿಂದೆ ಬೇರೆ ಏನೋ ಇರುತ್ತದೆ ಎನ್ನುವ ನಿರ್ಧಾರಕ್ಕೆ ನಮ್ಮ ಮನಸ್ಸು ಬಂದು ಬಿಟ್ಟಿದೆ. ಅಂದರೆ ನಾವು ಯಾರನ್ನು, ಅದರಲ್ಲೂ ಅಪರಿಚಿತ ವ್ಯಕ್ತಿಗಳನ್ನು  
  ಬೇಗ ನಂಬುವುದಿಲ್ಲ. ಅವರ ಬಗ್ಗೆ ನಮ್ಮಲ್ಲೊಂದು ಭಯ ಇದ್ದೆ ಇರುತ್ತದೆ.ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತ ವ್ಯಕ್ತಿ ಚಾಕೊಲೆಟ್ ಅಥಾವ ಏನಾದರೂ ತಿಂಡಿ ಕೊಟ್ಟರೆ. ಇದರಲ್ಲಿ ಏನೋ ಬೇರೆಸಿರಬಹುದೆಂಬ ಅನುಮಾನ.........  ನಿಜ, ಬೇರೆಸಿರುತರೋ ಇಲ್ಲವೋ ಆದರೆ ನಮ್ಮ  ಮನಸ್ಸು ಎಲ್ಲರನ್ನು ಅನುಮನಿಸುತ್ತದೆ.
   ಅನುಮಾನದಿಂದಲೇ ಎಷ್ಟೋ ಬಾರಿ ಕಾರಣವಿಲ್ಲದೆ ಕಾಣಿಸಿಕೊಂಡು ನಮ್ಮ ಸಹಾಯಕ್ಕೆ ನಿಲ್ಲುವ ವ್ಯಕ್ತಿಗಳನ್ನು ನಾವು ಕೆಟ್ಟದಾಗಿ ನೋಡುತ್ತೇವೆ, ಅವಮಾನಿಸುತ್ತೇವೆ,ನೆಗ್ಲೆಕ್ಟ್ ಮಾಡುತ್ತೇವೆ, ಬಯ್ಯುತ್ತೇವೆ.... ಒಟ್ಟಿನಲ್ಲಿ ನೀನು ಯಾವುದೇ ಪ್ರತಿಫಲಪೆಕ್ಷೆಯಿಲ್ಲದೇ  ಕೆಲಸ ಮಾಡುತ್ತಿಲ್ಲ ಎನ್ನುವ ರೀತಿಯಲ್ಲಿ ಅವರನ್ನು ನಡೆಸಿಕೊಂಡು ಬಿಡುತ್ತೇವೆ.ಸತ್ಯ ನಮಗೆ  ಗೊತ್ತಾಗುವ ಹೊತ್ತಿಗೆ ವ್ಯಕ್ತಿ ನಮಗೆ ಇನೆಂದು ಸಿಗದಷ್ಟು ದೂರ ಹೋಗಿ ಬಿಡುತ್ತಾರೆ. ಕೊನೆಗೊಂದು ಕ್ಷಮೆ ಕೇಳುವ ಅವಕಾಶ ಕೂಡ ನಮಗೆ ಸಿಕ್ಕದೇ ಹೋಗಿ ಬಿಡುತ್ತದೆ.
      ಮೋಸ ಮಾಡುವವರು,ಕಳ್ಳರು ಹೀಗೆ ಸಹಾಯ ಮಾಡುವ, ಪ್ರೀತಿ ತೋರಿಸುವ ಮುಖವಾಡ ಹಾಕಿಕೊಂಡೆ ದೊಚುವುದರಿಂದ ನಮ್ಮಲ್ಲಿ ಇಂತಹ ಮನೋಭಾವ ಸಹಜವಾದರೂ,ಯಾವುದೇ ವ್ಯಕ್ತಿ ನಮ್ಮ ಸಹಾಯಕ್ಕೆ ನಿಂತನೆಂದರೆ ತಕ್ಷಣಕ್ಕೆ ಅನುಮಾನಿಸುವ ಅಗತ್ಯವೇನು ಇಲ್ಲವಲ್ಲ?  ಅಥಾವ ಸಂಪೂರ್ಣವಾಗಿ ನಮ್ಮನ್ನು ನಾವು ಅವನಿಗೆ ತೆರೆದುಕೊಂಡು ನಂತರ ಪರಿತಪಿಸಬೇಕಾದ ಅಗತ್ಯವು ಇಲ್ಲವಲ್ಲ.
ಕಾಲ ಎಷ್ಟೇ ಕೆಟ್ಟಿದೆ ಎಂದರೂ ಇವತ್ತಿಗೂ ನಮ್ಮ ಸುತ್ತ ಮುತ್ತ  ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಸಹಾಯ ಮಾಡುವ, ಜೋತೆಯಗುವ ಲಕ್ಷಾಂತರ ವ್ಯಕ್ತಿತ್ವಗಳಿವೆ.ಅದಕ್ಕೆ ಕಾರಣಗಳು  ಹಲವಿರಬಹುದು. ಕೆಲವರಿಗೆ ತನಗೆ ಸಹಾಯ ಮಾಡುವ ಅವಕಾಸ ಸಿಕ್ಕಿದೆ ಮಾಡಬೇಕು ಎನ್ನುವ ಮನೋಭಾವ ಇರುತ್ತದೆ. ಇನ್ನು ಕೆಲವರು ತಾವೇ ಹಿಂದೊಮ್ಮೆ ಇಂತಹ ಸಂದರ್ಭದಲ್ಲಿ ಸಿಕ್ಕಿಬಿದ್ದು ನೋವು ತಿನ್ದಿರುತ್ತಾರೆ. ಅದರ ನೆನಪಿನಲ್ಲಿ ನಿಷ್ಕಲ್ಮಶ ಮನಸಿನಿಂದ ಸಹಾಯಕ್ಕೆ ನಿಲ್ಲುತ್ತಾರೆ.ಇನ್ನು ಕೆಲವರಲ್ಲಿ ಹುಟ್ಟಿನಿಂದ ಬಂದ ಗುಣವೇ ಅಂತಹದ್ದಿರುತ್ತದೆ; ಯಾರೇ ಕಷ್ಟದಲ್ಲಿದ್ದರೂ ಸಹಾಯ ಮಾಡಬೇಕಾದದ್ದು ನನ್ನ ಧರ್ಮ ಎನ್ನುವ ಮನಸಿರುತ್ತದೆ..... ಹೀಗೆ ಕಾರಣವಿಲ್ಲದೆ ಕಷ್ಟದಲ್ಲಿ ಯಾವುದೋ ಅಪರಿಚಿತ ವ್ಯಕ್ತಿಯ  ಕೈಹಿಡಿಯುವ ಒಬ್ಬೊಬ್ಬರಿಗೂ ಒಂದೊಂದು ಕಾರಣವಿರುತ್ತದೆ. ಏನೇ ಕಾರಣವಿದರೂ ಅದರ ಹಿಂದೆ ಒಂದು ನಿಷ್ಕಲ್ಮಶ ಮನಸ್ಸಂತು  ಕೆಲಸ ಮಾಡಿರುತ್ತದೆ.
  ಆದ್ದರಿಂದ ಇವನು ಅಪರಿಚಿತ ಹೇಗೆ ನಂಬುವುದು ಎಂದು ಅನುಮಾನಿಸಿ ಮೊದಲಿಗೆ ದೂರವಿಡುವ ಬದಲು, ನೀವೂ ಸ್ವಲ್ಪ ಯೋಚಿಸಿ. ತಕ್ಷಣ ನಂಬಬೇಕಾದ ಅಗತ್ಯವೂ ಇಲ್ಲಾ, ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದು ಮೆಲ್ಲಗೆ ನಿಮ್ಮನ್ನು ನೀವು ತೆರೆದುಕೊಳ್ಳಿ.ಆಗ ಅಪರಿಚಿತ ವ್ಯಕ್ತಿಗಳೂ ನಿಮ್ಮ ಬದುಕಿನೊಳಗೆ ಬಂದು ಪರಿಚಿತರಾಗಿ  ಬದುಕಿನ ಮಧುರ ನೆನಪಾಗಿ ಉಳಿಯುತ್ತಾರೆ. ಎಲ್ಲೋ ಕೆಲವರು ಮಾತ್ರ ಹೀಗೆ ಸಿಕ್ಕು ನಮ್ಮ ಬದುಕಿನ ಕೊನೆಯತನಕ ಜೊತೆಯಾಗಿ ನಮ್ಮವರಾಗಿಯೇ ಉಳಿದು ಬಿಡುತ್ತಾರೆ. ಅದು ನಮ್ಮ ಬದುಕಿನ ಅದೃಷ್ಟಗಳಲ್ಲಿ ಒಂದಷ್ಟೇ.
ಅಪರಿಚಿತ ಎಂದು ಅನುಮಾನಿಸಿ ದೂರವಿಟ್ಟುಬಿಡುವುದು, ಕೆಟ್ಟದಾಗಿ ನಡೆಸಿಕೊಳ್ಳುವುದು,   ಅವಮಾನಿಸುವುದು ಎಷ್ಟು ಸರಿಯಲ್ಲವೋ, ಅಪರಿಚಿತರನ್ನು ನೋಡಿದ ತಕ್ಷಣ ಇವನು ತುಂಬ ಒಳ್ಳೆಯವನು ಎಂದು ನಮ್ಮನ್ನು ನಾವು ನಂಬುವುದಕ್ಕಿಂತ ಜಾಸ್ತಿ ನಂಬಿ, ಎಲ್ಲಾವನ್ನು ಕಳೆದುಕೊಂಡು ಗೊಳದುವುದು ಅನುಭವದ ನಂತರ ಯಾರನ್ನು ನಂಬದೇ ಇರುವುದು ಕೂಡ ಒಳ್ಳೆಯದಲ್ಲ.

ಉತ್ತಮ್  ದಾನಿಹಳ್ಳಿ
enirantharablogspot.com