Sunday 23 June 2019

ಕವಿತೆ

ಯಾವ ಹೂವು
ಅರಳುವ ಮುನ್ನ
ಯಾವ ನೀರಿಕ್ಷೆಯನ್ನು
ಪಕಳೆಯಲ್ಲಿಟ್ಟುಕೊಂಡು
ಅರಳುವುದಿಲ್ಲ

ದೇವರ ತಲೆಗೊ,
ಪಾದಗಳಡಿಗೊ
ಸತ್ತವನೆದೆಗೊ
ಉರಿಯುವ ಚಿತೆಗೊ
ರಾಜಕಾರಣಿ, ಕಲಾವಿದ,
ಸಾಹಿತಿಯ ಎದೆಯ ಮೇಲೊ
ದಾರ ಕಟ್ಟಸಿಕೊಂಡು ಬೀಳಬಹುದು

ಹೆಣ್ಣಿನ ಅಂದದ
ಕೂದಲ ಶೃಂಗಾರಕ್ಕೊ
ಹುಡುಗಿಯನೊಲಿಸಲು
ಹುಡುಗನ ಕೈಯ
ಒಲುಮೆಯಲ್ಲೊ
ಅತಿಥಿಯ ಖುಷಿ
ಪಡಿಸಲು ಟೆಬಲ್ಲಿನ
ಹೂಜಿಯೊಳಗೆ ನಗುತ್ತಲೂ
ಕೂರಬಹುದು

ಮಕರಂದ ಹಿರಲು
ಬಂದ ದುಂಬಿಯ
ಸ್ಪರ್ಶದಲ್ಲಿ
ಮಳೆಯ ಹನಿಗಳನ್ನು
ಒಡಲೊಳಗಿಟ್ಟು
ಮುತ್ತಗಿಸುವಲ್ಲಿ
ಸೂರ್ಯನ ಶಾಖಕ್ಕೆ
ಮಾಜಿ ಹೋಗುವಲ್ಲಿಗೆ
ಹೂವಿನ ಸಂತೃಪ್ತಿ
ಮುಗಿಯಾಬಹುದು

ಅದೃಷ್ಟವೆಂಬುದು
ಹೂವಿಗೂ
ಸಹಜವಿರಬಹುದು
ಗಿಡ ತಂದು ನೆಟ್ಟವರ
ಅಭಿಲಾಷೆಗಳು
ಏನಿರಬಹುದೊ
ಬೇರಿಗೆ ನೀರುಣಿಸಿದವರ
ಆಕಾಂಕ್ಷೆ ಹೂವಿಗೂ
ತಿಳಿದಿರುವುದಿಲ್ಲ
ಹೂ ಕಿತ್ತವರು ಮಾತ್ರ
ನಿರ್ದಿಷ್ಟ ಮುಕ್ತಿ ತೋರಿಸುತ್ತರೆ

#ಉತ್ತಮ್
#ಹೂ_ಬದುಕಿನ_ಸಾಲು
#un_pluged

No comments:

Post a Comment