Sunday 23 June 2019

ನೆರಯನೋವಿಗೊಂದು ನಿಟ್ಟುಸಿರು

ಕವಿತೆ ಬರೆಯೊಣವೆಂದುಕೊಂಡರೆ
ಹಾಳೆಗ್ಯಾವ ಅಕ್ಷರವೂ
ಇಳಿಯುತ್ತಿಲ್ಲ
ಮೊದಲೆಲ್ಲ ಬರೆದಿಟ್ಟ
ಕವಿತೆಗಳೆಲ್ಲ
ಪೇಲವವೆನಿಸುತ್ತದೆ

ಮೊನ್ನೆ ಸ್ವರ್ಗದೂರಿಗೆ
ನೆರೆ ಬಂದು ಜೀವ
ಭಯ ಹಸಿವಿನ
ಭೊದನೆ ಮಾಡಿದ್ದು
ಎದೆಯಳೊಗೊಂದು
ತಲ್ಲಣ ಹುಟ್ಟಿಸುತ್ತದೆ

ರಕ್ತವೇನೂ ಹರಿಯಲಿಲ್ಲ
ಕುಸಿದ ಮಣ್ಣು
ಬಿದ್ದ ಇಟ್ಟಿಗೆ ಚೂರು
ಅಹಂ ನೂರಿನ ದಾರಿಯನ್ನು
ಮುಚ್ಚಿದ್ದು ಸುಳ್ಳಲ್ಲ

ಕಣ್ಣಿರ‌್ಯಾವುದು
ಮಳೆನೀರ‌್ಯಾವುದು
ತಿಳಿಯದೆ ಕೈ ಹಿಡಿದು
ಬದುಕಿಸಿದವರಿಗೆ
ಸಂತೃಪ್ತಿ ಯಷ್ಟೆ
ಬೇರ‌್ಯಾವ ನಿರೀಕ್ಷೆಗಳಿಲ್ಲ

ಬಿಸ್ಕೆಟ್ ಎಸೆದವನಿಗೆ
ಇ ನೋವು ಹಸಿವು
ಬರದೆ ಇರಬಹುದು
ಪಡೆದುಕೊಂಡವರ
ಎದೆಯಲ್ಲಿ ಮಾತ್ರ
ಹಸಿವು ನೀಗಿಸಿದವನ
ಕೈಗಳಷ್ಟೆ ನೆನಪು

ಇಲ್ಯಾವುದೆ
ತತ್ವ ಸಿದ್ದಾಂತಗಳು
ಬರಲಿಲ್ಲ
ಮೇಲು ಕೀಳೆಂಬ
ಅಹಂ ನಿಲ್ಲಲಿಲ್ಲ
ಇಲ್ಲೂಳಿದಿದೊಂದೆ
ಕಡೆಗೂ ಮಾನವೀಯತೆ

ಪ್ರವಾಹ ಬರಬಹುದು
ಮತ್ತೆ ನಮ್ಮ ಅಹಂಗಳನ್ನು
ನಿಮ್ಮ ತತ್ವ ಸಿದ್ದಾಂತಗಳು
ಮೇಲು ಕಿಳೆಂಬ
ಮನಸ್ಥಿತಿಗಳು
ಜೋಪಾನ
ಕೊಚ್ಚಿ ಹೋಗುವ
ಮುನ್ನ ಮಲಗೆದ್ದು ಬಿಡಿ

#ಉತ್ತಮ್
#ನೆರೆಯನೊವಿಗೊಂಚುರು_ನಿಟ್ಟುಸಿರು

No comments:

Post a Comment