Tuesday 25 May 2021

ಅಭಿಮಾನದ ಪ್ರೀತಿ

ನಮಿಬ್ಬರ ಪರಿಚಯವಾಗಿ
ವರುಷಗಳು ಕಳೆದು ಹೋಗಿವೆ
ತಿಂಗಳುಗಳು ಮರೆತಾಗಿದೆ
ದಿನಗಳು ಲೆಕ್ಕ ತಪ್ಪಿ ಆಗಿದೆ
ಆದರಿಲ್ಲಿ ನಮ್ಮಗಳ ನಡುವೆ
ಮಾತು ಅನುರೂಪವಲ್ಲದ
ಅಪರೂಪವೆ ಸರಿ

ನನದೆನೊ ಅಂಜಿಕೆ ಇರಬಹುದು
ನಿಮಗೆ ನಂಬಿಕೆಯ ಪ್ರಶ್ನೆ
ಧ್ವನಿಯೆ ಇಲ್ಲದ ಬೆರಳುಗಳ
ಸರಗಾಕ್ಕೆ ಮೀತಿ ಇಟ್ಟು
ನನ್ನನ್ನಿಲ್ಲಿ ಕಾತರಿಸಿ ಕನವರಿಸುವಂತೆ
ಮಾಡಿ ನಿವಲ್ಲಿ ಅನುಸರಣೆಯಲ್ಲಿರುತ್ತಿರಿ

ತುಟಿ ಬಿಚ್ಚಿ ನಗುವುದೆ ಕಡಿಮೆ
ನಿಮ್ಮ ಕಣ್ಣಳದ ನಗು
ಹುಡುಕುವುದು ನನಗಿಲ್ಲಿ ಹೆಮ್ಮೆ
ಸಿಗುವುದೆ ಕ್ಷಣ ಮಾತ್ರ
ಕಾದು ಕುಳಿತವನ ಎದೆಗೆ
ಮೌನದಲೆ ಸಂತುಷ್ಟತೆಯ
ಹೂವಿಟ್ಟು ನಡೆಯುವುದು 
ನಿಮಗೆಷ್ಟು ಸುಲಭ

ತರೆವರಿ ಬಣ್ಣಗಳು ನಿಮ್ಮೊಳಗೆ
ಚಿಟ್ಟೆ ಹಾರಾಡಿದಂತೆನೊ 
ತಲ್ಲಣ ನನ್ನೆದೆಯೊಳಗೆ
ಕಾಯುವುದೆನೊ ಅಬ್ಯಾಸವಾಗಿದೆ
ನನಗಿಗಾಲೆ ಆದರೂ ನಿಮ್ಮ 
ಆಗಮನವ ಸಂಭ್ರಮಿಸಿ
ಸ್ವಾಗತಿಸಲೆನೊ ಸೊಗಸು
ಎದೆಯಾಳದೊಳಗೆ

ದಂತಪಂಕ್ತಿ ಕಾಣುವಂತೆ
ನಗಬಹುದೆನೊ ಜಗವ 
ಮರೆಸುವಷ್ಟು ಮಾತಿನ 
ಮಳೆ ಸುರಿಸಬಹುದೆನೊ
ತೀರ ಹತ್ತಿರವಾಲ್ಲದಿದ್ದರೂ
ಷರತ್ತುಗಳ ವಿಧಿಸಾದರೂ
ಆಳಕ್ಕಿಳಿದು ಅರ್ಥೈಸಲು
ಅನುಮತಿ ನಿಡಬಹುದೆನೊ
ಕಾಯುವ ಸರದಿ ಎಂದಿಗೂ
ನನ್ನದೆ

   ‌‌‌‌  ‌‌‌‌‌       #ಉತ್ತಮ್
            #ಅಭಿಮಾನದ_ಪ್ರೀತಿಯಿಂದ

No comments:

Post a Comment