Tuesday 25 May 2021

ರಾತ್ರಿ ಎಂಬ ನೆನಪಿಗೆ

ಒಂದು ಜಾಗರಣೆಯ
ಸುಧೀರ್ಘ ರಾತ್ರಿಯ
ಹಾದಿಯಲಿ ಸಿಕ್ಕವಳ 
ಮನದಲ್ಲಿ ನೋವಿತ್ತು
ನೋವನ್ನು ಮರೆಮಾಚುವ
ಮೋಹದ ಉನ್ಮಥತೆ 
ಹಂಗಿಲ್ಲದ ಬಂಧವೊಂದು
ಕನವರಿಸಿ ಎಚ್ಚರವಾಗಿಸಿತ್ತು

ಬೆನ್ನ ಮೇಲಿನ ಗೀರು
ಕಣ್ಣಂಚಿನ ಬೀಸಿನೀರು
ಏರಿಳಿಯುವ ಉಸಿರು
ಮನಸಿನಾಳದ ಮೋಹರು
ದಾಟಿಕೊಳ್ಳಲು ದೂರವೇನು
ಭಾರವಾಗಿ ಕಾಯುವುದೂ ಇಲ್ಲಾ

ಬರೀ ಕಾಲಹರಣ
ಅವಕಾಶವಷ್ಟೆ ನಾನ್ಯಾರು
ನಿನ್ಯಾರೂ ಕೇಳಿಕೊಳ್ಳದೆ 
ಅಂತಃಕರಣಕ್ಕಿಳಿದ ಪೇಲವ
ವೆನಿಸಿದ ಇರುಳಿಗೆ
ರೋಚಕತೆಯ ತುಂಬಿಸಿ
ಬೆಳಕಾ ಹರಿಸಿದ್ದು
ನಾವೆಂದುಕೊಂಡು ಸಂಭ್ರಮಿಸಲು
ಕಾರಣವಲ್ಲದ ನೆನಪಷ್ಟೆ

ಮತ್ತದೆ ಬೋರು
ದಾಳಿಯಾಗದ ಕೊನರು
ಕೇಳಿಕೊಳ್ಳದ ಹೇಸರು
ಎಂದಿಗೂ ಚಿಗುರದ ಹಸಿರು
ಕಾಳಜಿಯೆಂದೂ ಪ್ರೀತಿಯೂ
ಅಲ್ಲಾ ಸ್ನೇಹಕ್ಕೂ ಬರುವುದಿಲ್ಲ
ಗುಂಗಿಲ್ಲದ ಭಾವಗಳೂ
ಕಟ್ಟು-ಪಾಡಿಗಂಜುವ 
ಬದುಕಿಗೊ ನಮ್ಮಿಬ್ಬರಿಗೂ
ಬೇಕು ಬೇಡದ ನೆಪವಷ್ಟೆ

ಹೆಣ್ಣೆಂದರೆ ಅರಳಿಮರವಲ್ಲ
ಸುತ್ತಿದಕ್ಷಣ ಒಲಿಯಲೂ
ಮೌನವಾದರೆ ಧ್ಯಾನವೆಂದು
ತಪ್ಪು ತಿಳಿದು
ಬೆಪ್ಪನಾದರೆ ಮುಗಿದೆ
ಹೋಯಿತು ಮನಸ್ಸು
ಅರಿಯದಿದ್ದರೂ ಪರಿಸ್ಥಿತಿಗಾಗಿ
ಚಡಪಡಿಸಬೇಕು

ನಿನಿಲ್ಲ ಇಲ್ಲಿ
ನನಗೂ ಇಲ್ಲೆನೂ ಇಲ್ಲಾ
ಅನಿರೀಕ್ಷಿತವಾದರೂ
ನಿರೀಕ್ಷಿತಾವಾಗೆ  ಕಾತರಿಸುತ್ತ
ಕಾದಿರಿಸಿದ್ದೆನೆ, ಬಾರದೆ
ಉಳಿಯಲೂ ಸಬೂಬು
ಸಿಗಬಹುದು ಬರಲಷ್ಟೆ
ನಿಜ ನಮ್ಮೊಳಗಿನ
ಬಂಧಗಳ ಮೀರಿ ಮತ್ತೆನೊ
ಇದೆ, ಬಂದು ಬೀಡು ಮತ್ತೆಂದೂ
ಎಲ್ಲೂ ಕದಲದಂತೆ

#ಉತ್ತಮ್
#linked 
#ರಾತ್ರಿಯ_ಪದ್ಯ

No comments:

Post a Comment